ಕೂಡಿಗೆ, ಆ. ೭: ಕೂಡಿಗೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಸಿ.ಎಂ. ಮಹಾಲಿಂಗಯ್ಯ ಅವರು ಉಪನಿರ್ದೇಶಕರಾಗಿ ಹಾಸನ ಜಿಲ್ಲೆಗೆ ನಿಯುಕ್ತಿ ಹೊಂದಿದ್ದು, ಈ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿAದ ಕೂಡಿಗೆ ಕಾಲೇಜು ಆವರಣದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭ ಸಂಘದ ಪದಾಧಿಕಾರಿಗಳಾದ ಫಿಲಿಪ್ ವಾಸ್, ಹಂಡ್ರAಗಿ ನಾಗರಾಜ್, ನಾಗೇಶ್, ನಾಗಪ್ಪ, ಮಲ್ಲೇಶ್, ಕೆ ಎಸ್.ಕೃಷ್ಣ, ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸತೀಶ್ ಬಾಬು, ಉಪನ್ಯಾಸಕರಾದ ಮಹೇಶ್, ಕುಮಾರ್, ಮೋಹನ್‌ಕುಮಾರ್, ನಂದೀಶ್ ಸೇರಿದಂತೆ ಕೂಡಿಗೆ ಕಾಲೇಜಿನ ಉಪನ್ಯಾಸಕ ವೃಂದದವರು ಪಾಲ್ಗೊಂಡಿದ್ದರು.