ಚೆಟ್ಟಳ್ಳಿ, ಆ. ೭: ಮಳೆಗಾಲ ಪ್ರಾರಂಭವಾದೊಡನೆ ಹೊಳೆಯಲ್ಲಿ ದೋಣಿಯ ಪ್ರಯಾಣದೊಂದಿಗೆ ಊರನ್ನು ದಾಟಿ ತಮ್ಮ ಕೆಲಸ ಕಾರ್ಯವನ್ನು ಮುಗಿಸಿ ಬೋಟಿನಲ್ಲೇ ತಮ್ಮ ಊರನ್ನು ತಲುಪುವ ಪರಿಸ್ಥಿತಿ ಇಂದಿಗೂ ಇಲ್ಲಿದೆ. ಭವಣೆಯ ಬದುಕಿನ ಜೊತೆಗೆ ನಾಲ್ಕುನಾಡು-ಬೇಂಗ್ನಾಡು ಸಂಪರ್ಕಸೇತುವೆ ನಿರ್ಮಾಣದ ಹಲವು ಶತಮಾನದ ಕನಸು ನನಸಾಗಲೇ ಇಲ್ಲ.
ಮಡಿಕೇರಿ ತಾಲೂಕಿಗೆ ಒಳಪಡುವ ಚೇರಂಬಾಣೆ ಪಂಚಾಯಿತಿ ಹಾಗೂ ಎಮ್ಮೆಮಾಡು ಪಂಚಾಯಿತಿಯನ್ನು ಸಂಪರ್ಕಿಸುವ ಕಾವೇರಿ ನದಿ ಹರಿಯುವ ಬೇಂಗೂರು ಗ್ರಾಮದ ದೋಣಿ ಕಡುವಿನಲ್ಲಿ ಮಳೆಗಾಲದಲ್ಲಿ ಗ್ರಾಮಸ್ಥರು ತೆರಳಲು ತಾಲೂಕು ಪಂಚಾಯಿತಿ ವತಿಯಿಂದ ಬೋಟನ್ನು ನೀಡಲಾಗಿದೆ. ಮಳೆಪ್ರಾರಂಭವಾಗುವ ಜೂನ್ನಿಂದ ಹಿಡಿದು ಡಿಸಂಬರ್ವರೆಗೂ ಶಾಲಾ ಮಕ್ಕಳು, ಕಾರ್ಮಿಕರು ಹಾಗೂ ಸ್ಥಳೀಯ ಗ್ರಾಮಸ್ಥರು ಬೋಟಿನಲ್ಲಿ ಪ್ರಯಾಣಿಸುತ್ತಾರೆ. ಸೇತುವೆ ನಿರ್ಮಾಣವಾಗದೆ ಕೇವಲ ಅರ್ಧಗಂಟೆಯಲ್ಲಿ ಬೋಟಿನಲ್ಲಿ ತೆರಳುವ ಜಾಗಕ್ಕೆ ವಾಹನದಲ್ಲಿ ಎರಡು ಗಂಟೆ ಹಾಗೂ ಹೆಚ್ಚು ಕಿ.ಮೀ. ಸುತ್ತಿ ಬರುವ ಪರಿಸ್ಥಿತಿಯಾಗಿದೆ. ಸೇತುವೆ ನಿರ್ಮಾಣವಾದರೆ ನಾಲ್ಕುನಾಡಿನಿಂದ ಮಡಿಕೇರಿಗೆ ತೆರಳಲು ಸುಮಾರು ೧೦ ಕಿ.ಮೀ. ಕಡಿಮೆಯಾಗಲಿದೆ. ಬೇಂಗುನಾಡಿನವರಿಗೆ ನಾಪೋಕ್ಲುವಿಗೆ ಬೆಟ್ಟಗೇರಿ ಮಾರ್ಗವಾಗಿ ತೆರಳಲು ೧೫ ಕಿ.ಮೀ. ತೆರಳುವ ಬದಲು ೧೦ ಕಿ.ಮೀ.ಗೆ ತಲುಪಬಹುದು. ಕಕ್ಕಬೆ, ವೀರಾಜಪೇಟೆಯಿಂದ ಚೇರಂಬಾಣೆ ಯಂತ ಹಲವು ಭಾಗಗಳಿಗೆ ತೆರಳಲು ಅನುಕೂಲವಾಗಲಿದೆ.
ದೋಣಿಯಲ್ಲಿ ತೆರಳುವವರಿಗೆ ರಕ್ಷಣೆ ಇಲ್ಲ..
ಜೋರಾಗಿ ಹರಿಯುವ ನದಿಯಲ್ಲಿ ಬೋಟಿನಲ್ಲಿ ತೆರಳುವವರಿಗೆ ಯಾವುದೇ ರಕ್ಷಣೆ ಇಲ್ಲದೆ ಜೀವವನ್ನು ಕೈಯಲ್ಲಿ ಹಿಡಿದು ತೆರಳುವ ಪರಿಸ್ಥಿತಿ ಇದೆ. ಹಿಂದೊಮ್ಮೆ ದೋಣಿಯಲ್ಲಿ ಹೆಚ್ಚಿನ ಜನರಿದ್ದ ಜೊತೆಗೆ ಗಾಳಿಯ ರಭಸಕ್ಕೆ ಫೈಬರ್ ದೋಣಿ ಮಗುಚಿ ಕೊಂಡಿತು. ಎಲ್ಲರನ್ನು ಕೈಹಿಡಿದು ಮೇಲೆತ್ತಿದ ಪರಿಣಾಮ ಅಂದು ಅನಾಹುತ ಗೊಳ್ಳಲಿಲ್ಲ. ಹಲವು ವರ್ಷಗಳ ಹಿಂದೆಲ್ಲ ಮಳೆಗಾಲದಲ್ಲಿ ಮರದ ದೋಣಿಯಲ್ಲಿ ಜನರನ್ನು ಸಾಗಿಸುತ್ತಿದ್ದರು. ನಂತರದಲ್ಲಿ ತಾಲೂಕು ಪಂಚಾಯಿತಿ ದೋಣಿಯನ್ನು ನೀಡಿದೆ. ಸಂತೆ ದಿನವಾದ ಮಂಗಳವಾರದAದು ಎಷ್ಟೇ ನೀರಿನ ಹರಿವಿದ್ದರೂ ಸಂತೆಗೆ ತೆರಳಲು ಗ್ರಾಮಸ್ಥರನ್ನು ಆಚೆದಡಕ್ಕೆ ತಲುಪಿಸುವ ಕಾರ್ಯ ದೋಣಿ ನಡೆಸುವವರದ್ದಾಗಿದೆ. ದೋಣಿ ನಡೆಸುವವರಿಗೆ ಗ್ರಾಮಸ್ಥರು ಹಣ ನೀಡುತಿದ್ದದ್ದು ಈಗ ಚೇರಂಬಾಣೆ ಪಂಚಾಯಿತಿ ೫ ಸಾವಿರ, ಎಮ್ಮೆಮಾಡು ಪಂಚಾಯಿತಿ ೫ ಸಾವಿರವನ್ನು ಆರು ತಿಂಗಳಿಗೆ ನೀಡುತಿದ್ದು, ಕೆಲವು ಪ್ರಯಾಣಿಕರು ನೀಡುವ ಹಣಕ್ಕೆ ದೋಣಿ ನಡೆಸುವಂತಾಗಿದೆ.
ಅAಬಿಗನಿಗೆ ಹಾಗೂ ಪ್ರಯಾಣಿಕರಿಗೆ ಲೈಫ್ ಜಾಕೇಟನ್ನು ನೀಡಬೇಕೆಂದು ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೂ ಈವರೆಗೂ ಲೈಫ್ ಜಾಕೇಟನ್ನು ನೀಡಿಲ್ಲ. ಮುಂದೆ ಅಪಾಯಗೊಳ್ಳುವ ಮೊದಲೇ ರಕ್ಷಣಾ ಸಾಮಗ್ರಿಗಳನ್ನು ನೀಡುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕಿದೆ.
ದೋಣಿಕಡುವಿನ ಸಂಪರ್ಕಸೇತುವೆ ನಿರ್ಮಾಣದ ಕನಸು..
ಯಂ.ಸಿ. ನಾಣಯ್ಯ ಅವರು ಕಾನೂನು ಮಂತ್ರಿಯಾಗಿದ್ದ ಸಮಯದಲ್ಲಿ ಹಲವು ಸೇತುವೆ ನಿರ್ಮಾಣದ ಜೊತೆಗೆ ಈ ನಾಲ್ಕುನಾಡು-ಬೇಂಗ್ನಾಡು ಸಂಪರ್ಕ ಸೇತುವೆ ನಿರ್ಮಿಸಲು ಮುತುವರ್ಜಿ ವಹಿಸಿದ್ದರು. ಭಾಗಮಂಡಲದಿAದ ನಾಪೋಕ್ಲುವಿನ ರಸ್ತೆ ತೀರಾ ಹಾಳಾಗಿದ್ದರಿಂದ ಗ್ರಾಮಸ್ಥರ ಒಪ್ಪಿಗೆ ಮೇರೆ ಆ ಹಣವನ್ನು ರಸ್ತೆ ಅಭಿವೃದ್ಧಿಗೆ ಬಳಸಿ ಮುಂದಿನ ಅನುದಾನದಲ್ಲಿ ಸೇತುವೆ ನಿರ್ಮಾಣಕ್ಕೆ ತೀರ್ಮಾನಿಸ ಲಾಯಿತು. ಎರಡೂ ಬದಿಗಳಲ್ಲಿ ನದಿಯವರೆಗೆ ಜಿಲ್ಲಾಪಂಚಾಯಿತಿ ವತಿಯಿಂದ ರಸ್ತೆ ನಿರ್ಮಿಸಿದ್ದರೂ ಇದೀಗ ಹಲವು ದಶಕಗಳೇ ಕಳೆದರೂ ಸೇತುವೆ ನಿರ್ಮಾಣದ ಕನಸು ನನÀಸಾಗಲೇ ಇಲ್ಲ.
ಸೇತುವೆ ನಿರ್ಮಾಣದ ಹತ್ತುಹಲವು ಯೋಜನೆಗಳು ಬಂದರೂ ದೋಣಿಕಡು ಸಂಪರ್ಕ ಸೇತುವೆ ನಿರ್ಮಾಣಕ್ಕೆ ತಲುಪಿಲ್ಲ. ಗ್ರಾಮಸ್ಥರು ಹಲವು ಬಾರಿ ಒತ್ತಾಯಿಸಿದರೂ ಪ್ರಯೋಜನ ವಾಗಿಲ್ಲ. ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸೇತುವೆ ನಿರ್ಮಾಣಕ್ಕೆ ಸಂಬAಧಪಟ್ಟ ಇಲಾಖೆಗೆ ಆದೇಶಿಸ ಬೇಕೆಂಬದು ಗ್ರಾಮಸ್ಥರ ಒತ್ತಾಯವಾಗಿದೆ.
-ಪುತ್ತರಿರ ಕರುಣ್ಕಾಳಯ್ಯ