ಗೋಣಿಕೊಪ್ಪ ವರದಿ, ಆ. ೭: ಕಳೆದ ೬ ತಿಂಗಳಿAದ ಹುದಿಕೇರಿ ಗ್ರಾಮ ಪಂಚಾಯಿತಿ ನೂತನ ಆಡಳಿತ ಮಂಡಳಿ ಪಾರದರ್ಶಕ ಆಡಳಿತ ನೀಡುತ್ತಿದೆ ಎಂದು ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಕ್ಕೇರ ಚಂದ್ರಪ್ರಕಾಶ್ ತಿಳಿಸಿದ್ದಾರೆ.

ಹುದಿಕೇರಿ ಗ್ರಾಮ ಪಂಚಾಯಿತಿ ಪಿಡಿಒ ಪರಮೇಶ್ ಹಾಗೂ ಸಿಬ್ಬಂದಿಯಿAದ ದುರುಪಯೋಗ ನಡೆದಿದೆ ಎಂಬ ಆರೋಪ ನಿರಾಧಾರವಾಗಿದ್ದು, ನಮ್ಮ ಅಧಿಕಾರವಧಿಯಲ್ಲಿ ಪಾರದರ್ಶಕತೆಗೆ ಒತ್ತು ನೀಡಿದ್ದೇವೆ. ಎಲ್ಲ ಸದಸ್ಯರು ಒಂದಾಗಿ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಗೂ ಮುನ್ನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಆಡಳಿತ ಅಧಿಕಾರಿಗೆ ಪಂಚಾಯಿತಿ ಮುನ್ನಡೆಸುವ ಜವಬ್ದಾರಿ ಇರುತ್ತದೆ. ಆ ಸಮಯದಲ್ಲಿ ಏನು ನಡೆದಿದೆ ಎಂಬ ಬಗ್ಗೆ ನಮಗೆ ನಿಖರ ಮಾಹಿತಿ ಇಲ್ಲ. ಈ ಬಗ್ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶಾಸಕ ಕೆ. ಜಿ. ಬೋಪಯ್ಯ ಗಮನಕ್ಕೆ ತರಲಾಗಿದ್ದು, ಪಿಡಿಒ ಬದಲಾವಣೆ ಮಾಡಲಾಗಿದೆ. ಸದಸ್ಯರು ಒಂದಾಗಿ ಕ್ರಿಯಾಯೋಜನೆ ರೂಪಿಸಿಕೊಂಡು ಅಭಿವೃದ್ಧಿಯತ್ತ ಚಿಂತನೆ ನಡೆಸಿದ್ದೇವೆ ಎಂದರು.

ಉಪಾಧ್ಯಕ್ಷೆ ಕೊಡಂಗಡ ದಮಯಂತಿ, ಸದಸ್ಯರಾದ ಕೆ. ಪಿ. ಬಿದ್ದಪ್ಪ, ಮಂಡೆಚAಡ ರಾಜಿ ಪೊನ್ನಪ್ಪ, ಕುಪ್ಪಣಮಾಡ ಕಾವೇರಮ್ಮ ಅವರುಗಳು ಸದಸ್ಯರು ಒಟ್ಟಾಗಿ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಪಿಡಿಒ ಪರಮೇಶ್ ಎಲ್ಲರನ್ನು ಗಣನೆಗೆ ತೆಗೆದುಕೊಳ್ಳದ ಕಾರಣ, ಆರೋಪ ವ್ಯಕ್ತವಾಗಿದೆ. ಸರ್ವಾಧಿಕಾರಿ ಧೋರಣೆಗೆ ಪಿಡಿಒ ಮುಂದಾಗಿದ್ದರು. ಇದಕ್ಕೆ ವಿರೋಧಿಸಿದ್ದ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದರು.

ಈ ಬಗ್ಗೆ ಸಿಇಒ, ವೀರಾಜಪೇಟೆ ತಾಲೂಕು ಇಒ ಅವರಿಂದ ಉತ್ತಮ ಮಾರ್ಗದರ್ಶನ ದೊರೆತಿದೆ. ನೂತನವಾಗಿ ನೇಮಿಸಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಚರ್ಚಿಸಿಕೊಂಡು ಭೃಷ್ಟಾಚಾರ ಮುಕ್ತ ಆಡಳಿತ ನಡೆಸಲು ಮುಂದಾಗಿದ್ದೇವೆ ಎಂದರು.