ವೀರಾಜಪೇಟೆ, ಆ. ೭: ಹಲವಾರು ಬಾರಿ ರಕ್ತದಾನ ಮಾಡಿದ ಮುಖ್ಯಪೇದೆಗೆ ಜೈ ಭಾರತ ರಕ್ಷಣಾ ವೇದಿಕೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಮುಖ್ಯಪೇದೆ ಬಿ.ಎಂ. ರಾಮಪ್ಪ ಅವರಿಗೆ ಠಾಣೆಯಲ್ಲಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಜೈ ಭಾರತ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷÀ ಬಬ್ಬೀರ ಯು. ಜೋಯಪ್ಪ ಜೀವ ಉಳಿಸುವ ಕಾರ್ಯದಲ್ಲಿ ರಕ್ತದಾನವು ಮಹತ್ವವನ್ನು ಪಡೆದಿದೆ. ಸರ್ಕಾರಿ ಸೇವೆಯಲ್ಲಿದ್ದ ಸುಮಾರು ೪೩ ಬಾರಿ ರಕ್ತದಾನ ಮಾಡಿರುವುದು ಸಮಾಜ ಮುಖಿಯಾದ ಕಾರ್ಯವಾಗಿದೆ. ಇದು ರಕ್ತ ನೀಡುವ ಪ್ರತಿಯೊಬ್ಬ ದಾನಿಗಳಿಗೆ ಪ್ರೇರಣೆಯಾಗಿದೆ ಎಂದರು. ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್. ಮನೋಹರ್, ನಗರ ಉಪಾಧ್ಯಕ್ಷ ಪಿ.ಎಸ್. ಇಬ್ರಾಹಿಂ, ತಾಲೂಕು ಸಂಚಾಲಕರಾದ ಸಿ.ಪಿ. ದೇವಯ್ಯ, ಬಿ.ಜೆ. ಭವನ್ ಯಶ್ವಂತ್ ಮತ್ತು ಸದಸ್ಯರು ಹಾಗೂ ಠಾಣೆಯಲ್ಲಿ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.