ಮಡಿಕೇರಿ, ಆ. ೬: ಅಹಿಂದ ಒಕ್ಕೂಟದ ವತಿಯಿಂದ ತಾ. ೨೦ ರಂದು ನಡೆಯುವ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಹರಿಕಾರ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಹಮತ ವೇದಿಕೆ ನಿರ್ಧರಿಸಿದೆ.

ನಗರದ ಪತ್ರಿಕಾಭವನದಲ್ಲಿ ನಡೆದ ವೇದಿಕೆಯ ಸಭೆಯಲ್ಲಿ ಅರಸು ದಿನಾಚರಣೆಯ ಸಹಭಾಗಿತ್ವ ವಹಿಸುವ ಕುರಿತು ಬಂದ ಕೋರಿಕೆ ಪತ್ರದಂತೆ ನಿರ್ಣಯ ಕೈಗೊಳ್ಳಲಾಯಿತು.

ಅರಸು ಜನ್ಮದಿನಾಚರಣೆಯ ವೇದಿಕೆಯ ಸಂಚಾಲಕ ಎಸ್. ಮಹೇಶ್ ಸೋಮವಾರಪೇಟೆಯಲ್ಲಿ ವಚನ ಸಾಹಿತ್ಯಕ್ಕೆ ಸಂಬAಧಿಸಿದAತೆ ಸದ್ಯದಲ್ಲೇ ಕಾರ್ಯಕ್ರಮ ಮಾಡುವುದಾಗಿ ಹೇಳಿದರು.

ಕೋವಿಡ್ ಸೋಂಕು ಕಡಿಮೆಗೊಂಡ ನಂತರ ಬಸವತತ್ವ-ಸಾಮಾಜಿಕ ನ್ಯಾಯದ ವಿಚಾರಗೋಷ್ಠಿ ನಡೆಸಲು ಸಭೆ ನಿರ್ಧರಿಸಿತು.

ಸದಸ್ಯರುಗಳಾದ ಪ್ರೇಮಾ ಕೃಷ್ಣಪ್ಪ, ಯಶೋಧ, ಸ್ವರ್ಣಲತಾ, ಕೆ.ಟಿ. ಬೇಬಿ ಮ್ಯಾಥ್ಯು, ಅಂಬೆಕಲ್ಲು ನವೀನ್, ಎನ್.ಐ. ಮುನೀರ್ ಅಹಮ್ಮದ್, ಎಂ.ಎA. ಲಿಯಾಖತ್ ಆಲಿ, ವಿಲ್‌ಫ್ರೆಡ್ ಕ್ರಾಸ್ತಾ ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆಯ ಕೋಶಾಧಿಕಾರಿ ಟಿ.ಎಂ. ಮುದ್ದಯ್ಯ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಆರ್.ಪಿ. ಚಂದ್ರಶೇಖರ್ ವಂದಿಸಿದರು.