ಮಡಿಕೇರಿ, ಆ. ೬: ಸೋಮವಾರಪೇಟೆ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇರುವ ಕೇಂದ್ರದ ಹೆಸರು: ದುಂಡಳ್ಳಿ ಪಂಚಾಯಿತಿಯ ಹೆಮ್ಮಾನೆ (ಇತರೆ), ವಾಲ್ನೂರು-ತ್ಯಾಗತ್ತೂರು ಪಂಚಾಯಿತಿಯ ಬಾಳೆಗುಂಡಿ (ಪ.ಪಂ.) ಗುಡ್ಡೆಹೊಸೂರಿನ ದೊಡ್ಡಬೆಟ್ಟಗೇರಿ (ಪ.ಪಂ.), ಗಣಗೂರು ಪಂಚಾಯಿತಿಯ ಗೋಣಿಮರೂರು (ಇತರೆ), ಚೌಡ್ಲು ಪಂಚಾಯಿತಿಯ ಕಿಬ್ಬೆಟ್ಟ ಮಿನಿ (ಇತರೆ), ಬೇಳೂರು ಪಂಚಾಯಿತಿಯ ಕುಸುಬೂರು ಮಿನಿ (ಪ.ಜಾ.), ನೇರುಗಳಲೆ ಪಂಚಾಯಿತಿಯ ಅರೆಯೂರು (ಇತರೆ).

ಅಂಗನವಾಡಿ ಸಹಾಯಕಿಯರ ಹುದ್ದೆಗೆ ಖಾಲಿ ಇರುವ ಕೇಂದ್ರದ ಹೆಸರು: ದುಂಡಳ್ಳಿ ಪಂಚಾಯಿತಿಯ ಹೆಮ್ಮಾನೆ (ಇತರೆ), ನೇರುಗಳಲೆಯ ಅಬ್ಬೂರುಕಟ್ಟೆ (ಇತರೆ), ಕೂಡುಮಂಗಳೂರು ಪಂಚಾಯಿತಿಯ ವಿಜಯನಗರ (ಇತರೆ), ಕೊಡ್ಲಿಪೇಟೆಯ ಕಿರಿಕೊಡ್ಲಿ (ಇತರೆ), ಹಂಪಾಪುರ (ಇತರೆ), ಬ್ಯಾಡಗೊಟ್ಟದ ಶಿವರಳ್ಳಿ (ಇತರೆ), ನಿಡ್ತ ಪಂಚಾಯಿತಿಯ ನಿಡ್ತಕೊಪ್ಪಲು (ಇತರೆ), ಹರದೂರಿನ ಹೊಸತೋಟ (ಇತರೆ), ಮಾದಾಪುರದ ಮೂವತ್ತೊಕ್ಲು (ಇತರೆ), ಬೆಟ್ಟದಳ್ಳಿಯ ನಗರಳ್ಳಿ (ಇತರೆ).

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ತಾ. ೩೧ ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಉರ್ತ್ತಿರ್ಣರಾಗಿರಬೇಕು ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗೆ ೪ ರಿಂದ ೯ನೇ ತರಗತಿಯೊಳಗೆ ವ್ಯಾಸಂಗ ಮಾಡಿರಬೇಕು, ೧೮ ರಿಂದ ೩೫ ವರ್ಷ ವಯೋಮಿತಿಯೊಳಗಿರಬೇಕು ಮತ್ತು ವಿಶೇಷಚೇತನ ಮಹಿಳೆಯರಿಗೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಮಾತ್ರ ೧೦ ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ, ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರಾಗಿದ್ದಾರೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವೆಬ್‌ಸೈಟ್ ತಿತಿತಿ.ಚಿಟಿgಚಿಟಿತಿಚಿಜiಡಿeಛಿಡಿuiಣ.ಞಚಿಡಿ.ಟಿiಛಿ.iಟಿ ನಲ್ಲಿ ಅರ್ಜಿಯನ್ನು ಭರ್ತಿ ಮಾಡಬಹುದಾಗಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗಿದ್ದು, ಇತರೆ ಯಾವುದೇ ರೂಪದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಹೆಚ್ಚಿನ ಮಾಹಿತಿಗೆ ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ ೦೮೨೭೬-೨೮೨೨೮೧ ದೂ.ಸಂ.ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇಮಕಾತಿ ಸಮಿತಿಯ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.