ಮಡಿಕೇರಿ, ಆ. ೬: ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೂತ್ ಹಾಸ್ಟೇಲ್ ಅಸೋಸಿಯೇಶನ್, ಮಡಿಕೇರಿ ಘಟಕ. ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ತಾ. ೧೪ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕಗ್ಗೋಡ್ಲು ಗ್ರಾಮದ ದಿ. ಸಿ.ಡಿ. ಬೋಪಯ್ಯ ಅವರ ಗದ್ದೆಯಲ್ಲಿ ೨೦೨೧-೨೨ನೇ ಸಾಲಿನ ರಾಜ್ಯ ಮಟ್ಟದ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆ ನಡೆಯಲಿದೆ.

ಹಗ್ಗ ಜಗ್ಗಾಟ ಪುರುಷರ ವಿಭಾಗ (೯ ಜನರ ತಂಡ), ಹಗ್ಗ-ಜಗ್ಗಾಟ ಮಹಿಳೆಯರ ವಿಭಾಗ (೯ ಜನರ ತಂಡ), ಹಗ್ಗ-ಜಗ್ಗಾಟ ಪ್ರೌಢಶಾಲಾ ಬಾಲಕರಿಗೆ (೯ ಜನರ ತಂಡ), ಹಗ್ಗ ಜಗ್ಗಾಟ ಪ್ರೌಢಶಾಲಾ ಬಾಲಕಿಯರಿಗೆ (೯ ಜನರ ತಂಡ). ಕಿರಿಯರ ಪ್ರಾಥಮಿಕ ಶಾಲಾ ಬಾಲಕರಿಗೆ ೫೦ ಮೀ ಓಟ, ಕಿರಿಯರ ಪ್ರಾಥಮಿಕ ಶಾಲಾ ಬಾಲಕಿಯರಿಗೆ ೫೦ ಮೀ. ಓಟ, ಹಿರಿಯರ ಪ್ರಾಥಮಿಕ ಶಾಲಾ ಬಾಲಕರಿಗೆ ೧೦೦ ಮೀ. ಓಟ, ಹಿರಿಯರ ಪ್ರಾಥಮಿಕ ಶಾಲಾ ಬಾಲಕಿಯರಿಗೆ ೧೦೦ ಮೀ. ಓಟ, ಪ್ರೌಢಶಾಲಾ ಬಾಲಕರಿಗೆ ೨೦೦ ಮೀ. ಓಟ, ಪದವಿಪೂರ್ವ ಕಾಲೇಜು ಬಾಲಕರಿಗೆ ೩೦೦ ಮೀ. ಓಟ, ಪದವಿಪೂರ್ವ ಕಾಲೇಜು ಬಾಲಕಿಯರಿಗೆ ೩೦೦ ಮೀ. ಓಟ, ೪೦ವರ್ಷ ಮೇಲ್ಟಟ್ಟವರಿಗೆ ಪುರುಷರಿಗೆ ೩೦೦ ಮೀ. ಓಟ, ೪೦ ವರ್ಷ ಮೇಲ್ಟಟ್ಟವರಿಗೆ ಮಹಿಳೆಯರಿಗೆ ೩೦೦ ಮೀ. ಓಟ, ಸಾರ್ವಜನಿಕ ಪುರುಷರ ಮುಕ್ತ ಓಟ, ಸಾರ್ವಜನಿಕ ಮಹಿಳೆಯರ ಮುಕ್ತ ಓಟ, ಕಗ್ಗೋಡ್ಲು ಗ್ರಾಮಸ್ಥರಿಗೆ ಸಾಂಪ್ರದಾಯಿಕ ನಾಟಿ ಓಟ, ನಂತರ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ.

ಹಗ್ಗ-ಜಗ್ಗಾಟಕ್ಕೆ (ಪುರುಷರ ವಿಭಾಗಕ್ಕೆ) ತಂಡಗಳಿಗೆ ಮೈದಾನ ಶುಲ್ಕ ರೂ. ೧೦೦೦ ಆಗಿದೆ. ಮಹಿಳೆಯರ ಹಗ್ಗ-ಜಗ್ಗಾಟ ತಂಡಗಳಿಗೆ ಮೈದಾನ ಶುಲ್ಕ ರೂ. ೫೦೦ ಆಗಿದೆ. ಇದನ್ನು ಆಯಾ ತಂಡಗಳು ತಾ. ೧೨ ರ ಮಧ್ಯಾಹ್ನ ೨ ಗಂಟೆಯೊಳಗೆ ಪಾವತಿಸಿ ತಂಡದ ಭಾಗವಹಿಸುವಿಕೆಯನ್ನು ಖಾತರಿಪಡಿಸಬೇಕು.

ಕ್ರೀಡಾ ತಂಡಗಳ ಪಂದ್ಯಗಳಿಗೆ ಆಕರ್ಷಕ ಪಾರಿತೋಷಕ ಮತ್ತು ನಗದು ಬಹುಮಾನ ನೀಡಲಾಗುವುದು (ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಗೆ), ಪ್ರೌಢ ಶಾಲಾ ವಿಭಾಗದ ಹಗ್ಗ ಜಗ್ಗಾಟದಲ್ಲಿ ಭಾಗವಹಿಸುವವರು ತಮ್ಮ ವಿದ್ಯಾ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ನಡೆಸಲಾಗುವುದು (ಮೈದಾನ ಶುಲ್ಕ ಇಲ್ಲ). ಓಟದ ಸ್ಪರ್ಧೆಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಪಾರಿತೋಷಕಗಳನ್ನು ಮತ್ತು ಪ್ರಶಂಸನಾ ಪತ್ರ ನೀಡಲಾಗುವುದು.

ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆ ಬೆಳಿಗ್ಗೆ ೯ ಗಂಟೆಗೆ ಉದ್ಘಾಟನೆಯ ನಂತರ ಆರಂಭವಾಗಲಿದ್ದು, ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ. ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಕೋವಿಡ್-೧೯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಹೆಚ್ಚಿನ ಮಾಹಿತಿಗೆ ನವೀನ್ ದೇರಳ, ಅಧ್ಯಕ್ಷರು, ತಾಲೂಕು ಯುವ ಒಕ್ಕೂಟ ಮಡಿಕೇರಿ- ೯೭೪೦೪೦೪೫೨೦, ಬಾಲಾಡಿ ದಿಲೀಪ್ ಕುಮಾರ್, ಕಾರ್ಯದರ್ಶಿ, ತಾಲೂಕು ಯುವ ಒಕ್ಕೂಟ ಮಡಿಕೇರಿ-೯೪೮೦೬೭೪೫೪೬, ಪಿ.ಪಿ. ಸುಕುಮಾರ್ ಅಧ್ಯಕ್ಷರು ಕೊಡಗು ಜಿಲ್ಲಾ ಯುವ ಒಕ್ಕೂಟ ೯೪೮೧೨೧೩೯೨೦. ಇವರುಗಳನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್. ಗುರುಸ್ವಾಮಿ ತಿಳಿಸಿದ್ದಾರೆ.