ಮುಳ್ಳೂರು, ಆ. ೬: ಸಮೀಪದ ಗೋಪಾಲಪುರ ಒಡೆಯನಪುರ ಗ್ರಾಮದ ನಿವಾಸಿ ಷಣ್ಮುಖ (೬೧) ೧ ವರ್ಷದ ಹಿಂದಿನಿAದ ಕಾಣೆಯಾಗಿರುವುದಾಗಿ ಅವರ ಪತ್ನಿ ವಿ.ಎಸ್. ಅನುಸೂಯ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮ್ಮ ಪತಿ ಷಣ್ಮುಖ ಅವರು ತಾ.೧೩-೯-೨೦೨೦ ರಂದು ಮನೆಯಿಂದ ಹೊರಗಡೆ ಹೋಗುತ್ತೇನೆಂದು ಹೇಳಿ ಹೋದವರು ಇನ್ನೂ ಹಿಂತಿರುಗಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೊರೊನಾ ಹಿನ್ನೆಲೆ ನನ್ನ ಪತಿಗೆ ಕೂಲಿ ಕೆಲಸ ಸಿಗದೆ ಮನೆಯಲ್ಲೆ ಇದ್ದು, ತಾ.೧೩-೯-೨೦ ರಂದು ಹೊರಗಡೆ ಎಲ್ಲಿಯಾದರೂ ಹೊಟೇಲು ಕೆಲಸ ಮಾಡಲು ವಿಚಾರಿಸಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೋದವರು ಇನ್ನೂ ವಾಪಾಸು ಬಂದಿಲ್ಲ ಎಂದು ಠಾಣೆಗೆ ದೂರು ನೀಡಿದ್ದಾರೆ.

ಕಾಣೆಯಾಗಿರುವ ಷಣ್ಮುಖ ಅವರ ಮಾಹಿತಿ ದೊರೆತಲ್ಲಿ ಮೊ.ನಂ.೯೧೦೮೭೨೨೮೩೪೭ ಸಂಪರ್ಕಿಸಲು ಪೊಲೀಸ್ ಪ್ರಕಟಣೆ ತಿಳಿಸಿದೆ.