ಬೆಂಗಳೂರು, ಆ. ೬: ಕರ್ನಾಟಕದಲ್ಲಿ ಲಾಕ್ಡೌನ್ ರದ್ಧತಿ ಬಳಿಕ ಮತ್ತೆ ಕೋವಿಡ್ ಸೋಂಕು ಹೆಚ್ಚುತ್ತಿರುವ ಸನ್ನಿವೇಶವನ್ನು ಪರಿಗಣಿಸಿ ರಾಜ್ಯ ಸರ್ಕಾರವು ಇದೀಗ ಕೋವಿಡ್ ನಿಯಂತ್ರಣಕ್ಕಾಗಿ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯು ಆಗಸ್ಟ್ ೧೬ರವರೆಗೆ ಜಾರಿಯಲ್ಲಿರುತ್ತದೆ.
ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ಎಲ್ಲಾ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಆಗಸ್ಟ್ ೭ರಿಂದ ೧೬ರವರೆಗೆ ಜಾರಿಯಲ್ಲಿರುವಂತೆ ಕೆಲವೊಂದು ನಿರ್ಬಂಧಗಳನ್ನು ಘೋಷಿಸಿದ್ದಾರೆ.
ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ರಾತ್ರಿ ೯ರಿಂದ ಪ್ರತಿದಿನ ಬೆಳಿಗ್ಗೆ ೫ರವರೆಗೆ ಜಾರಿಯಲ್ಲಿರುತ್ತದೆ.
ಕೊಡಗಿನಲ್ಲಿ ವಾರಾಂತ್ಯ ಕರ್ಫ್ಯೂ
ಕೊಡಗು ಜಿಲ್ಲೆಯೂ ಸೇರಿದಂತೆ ಕೇರಳ ಮತ್ತು ಮಹಾರಾಷ್ಟçದ ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಕಲಬುರ್ಗಿ, ದಕ್ಷಿಣ ಕನ್ನಡ, ಮೈಸೂರು ಹಾಗೂ ಚಾಮರಾಜನಗರಗಳಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ವಾರಾಂತ್ಯದ ಕರ್ಫ್ಯೂ ನಿರ್ಬಂಧವು ಪ್ರತಿ ಶುಕ್ರವಾರ ರಾತ್ರಿ ೯ರಿಂದ ಸೋಮವಾರ ಬೆಳಿಗ್ಗೆ ೫ ಗಂಟೆಯವರೆಗೆ ಹೇರಲ್ಪಟ್ಟಿದೆ. ಕೊಡಗು ಜಿಲ್ಲಾಧಿಕಾರಿಯವರು ಸರಕಾರದ ಆದೇಶಕ್ಕೆ ಪೂರಕವಾಗಿ ಜಿಲ್ಲಾ ಮಟ್ಟದಲ್ಲಿಯೂ ನೂತನ ಮಾರ್ಗಸೂಚಿ ಹೊರಡಿಸಿದ್ದಾರೆ.
(ಮೊದಲ ಪುಟದಿಂದ)
ವಾರಾAತ್ಯ ಕರ್ಫ್ಯೂ ಸಂದರ್ಭದ ನಿರ್ಬಂಧಗಳು ಹಾಗೂ ಸಡಿಲಿಕೆಗಳು
ವಾರಾಂತ್ಯ ನಿರ್ಬಂಧ ಅವಧಿಯಲ್ಲಿ ಸಭೆ - ಸಮಾರಂಭಗಳು, ವೈವಾಹಿಕ ಕಾರ್ಯಕ್ರಮಗಳನ್ನು ನಡೆಸಲು ೧೦೦ಕ್ಕಿಂತ ಅಧಿಕ ಮಂದಿ ಒಂದೆಡೆ ಸೇರಬಾರದು. ಅಂತ್ಯಕ್ರಿಯೆಗಳಿಗೆ ೨೦ಕ್ಕಿಂತ ಅಧಿಕ ಮಂದಿ ಸೇರಬಾರದು. ಎಲ್ಲಾ ಧರ್ಮೀಯರ ಪ್ರಾರ್ಥನಾ ಮಂದಿರಗಳನ್ನು ತೆರೆಯಬಹುದಾಗಿದೆ. ಆದರೆ, ಕೋವಿಡ್ ನಿಯಮಾನುಸಾರ ಜಾತ್ರೆ, ಹಬ್ಬ, ಮೆರವಣಿಗೆ ಹಾಗೂ ಜನರ ದಟ್ಟಣೆಯನ್ನು ನಿಷೇಧಿಸಲಾಗಿದೆ.
ಎಲ್ಲಾ ರಾಜ್ಯ ಸರ್ಕಾರಿ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು ಎಂದಿನAತೆ ನಿರ್ವಹಣೆಗೊಳ್ಳುತ್ತವೆ. ಕೈಗಾರಿಕೆಗಳು, ಕಂಪೆನಿಗಳು, ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಸಮರ್ಪಕ ಗುರುತು ಪತ್ರ ಹೊಂದಿರಬೇಕು. ಇದೇ ರೀತಿ ಟೆಲಿಕಾಂ, ಇಂಟರ್ನೆಟ್ ಸಂಸ್ಥೆಗಳು, ಐಟಿ ಸಂಸ್ಥೆ ಮತ್ತು ಕಂಪೆÀನಿಗಳು ಕಾರ್ಯನಿರ್ವಹಿಸಬಹುದು. ಆದರೆ, ಅಗತ್ಯ ಸಿಬ್ಬಂದಿಗಳನ್ನಷ್ಟೇ ಬಳಸಿಕೊಂಡು ಉಳಿದವರು ಮನೆಯಿಂದಲೇ ಕಾರ್ಯನಿರ್ವಹಿಸಬೇಕು. ರೋಗಿಗಳು ಅವರ ನಿಕಟವರ್ತಿಗಳು ವ್ಯಾಕ್ಸಿನೇಷನ್ಗೆ ತೆರಳುವವರು ಸೂಕ್ತ ಗುರುತಿನ ಸಹಿತ ಸಂಚರಿಸಬಹುದು. ಅದೇ ರೀತಿ ಅಗತ್ಯ ವಸ್ತುಗಳು, ಮತ್ತಿತರ ಸಾರ್ವಜನಿಕ ಉಪಯೋಗಿ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿ ಮಳಿಗೆಗಳನ್ನು ಬೆಳಿಗ್ಗೆ ೫ರಿಂದ ಮಧ್ಯಾಹ್ನ ೨ರವರೆಗೆ ತೆರೆಯಬಹುದು. ಇದೇ ರೀತಿ ಬೀದಿ ವ್ಯಾಪಾರಿಗಳು ಕೂಡ ಇದೇ ನಿಯಮ ಪಾಲಿಸಬೇಕು. ಅಲ್ಲದೆ, ಪಡಿತರ ವಿತರಣೆ, ಮದ್ಯ ಮಾರಾಟ ಮಳಿಗೆಗಳು ಕೂಡ ಇದೇ ಸಮಯದವರೆಗೆ ತೆರೆದಿರಬಹುದು. ಮನೆಗಳಿಗೆ ಸರಬರಾಜು ಮಾಡುವುದಕ್ಕೆ ಸಮಯ ನಿರ್ಬಂಧವಿಲ್ಲ. ಉಪಹಾರ ಕೇಂದ್ರಗಳು, ಹೊಟೇಲ್ಗಳು ಕೇವಲ ಪಾರ್ಸಲ್ಗಳನ್ನು ನೀಡಬಹುದಾಗಿದೆ. ಅಗತ್ಯ ಕೆಲಸಗಳಿಗೆ ಹಾಗೂ ಅನಿವಾರ್ಯ ಕೆಲಸಗಳಿಗೆ ಮಾತ್ರ ವಾಹನಗಳ ಸಂಚಾರವನ್ನು ನಡೆಸಬಹುದು. ಅನಗತ್ಯ ಸಂಚಾರಕ್ಕೆ ಅವಕಾಶವಿಲ್ಲ.