ಮಡಿಕೇರಿ, ಆ.೫: ಸ್ವಾತಂತ್ರö್ಯ ದಿನಾಚರಣೆ ಸಮೀಪಿಸುತ್ತಿದ್ದು, ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಧ್ವಜಗಳ ಮಾರಾಟ ಹಾಗೂ ತ್ರಿವರ್ಣ ಧ್ವಜವಿರುವ ಮಾಸ್ಕ್ಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದೆ. ಮಾರಾಟಗಾರರು ಹಾಗೂ ಬಳಕೆದಾರರು ರಾಷ್ಟç ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ನಗರಸಭೆಯೊಂದಿಗೆ ಕೈಜೋಡಿಸುವಂತೆ ಪೌರಾಯುಕ್ತ ಎಸ್.ವಿ.ರಾಮದಾಸ್ ಅವರು ಮನವಿ ಮಾಡಿದ್ದಾರೆ.

ನಿಯಮ ಉಲ್ಲಂಘಿಸುವುದು ಕಂಡುಬAದಲ್ಲಿ ಕರ್ನಾಟಕ ಪೌರಸಭೆ ಕಾಯ್ದೆ ೧೯೬೪ರ ಅಧಿನಿಯಮ ೨೫೬ ರಡಿ ಕ್ರಮವಹಿಸಿ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.