ಮಡಿಕೇರಿ, ಆ. ೫: ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಕರ್ಣಂಗೇರಿ ಗ್ರಾಮದಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಯಿತು.
ಇತ್ತೀಚೆಗೆ ಗ್ರಾ.ಪಂ. ಸದಸ್ಯ ಕರ್ಣಂಗೇರಿಯ ಜಾನ್ಸನ್ ಪಿಂಟೋ ಅವರ ನೇತೃತ್ವದಲ್ಲಿ ನಡೆದ ಲಸಿಕಾ ಶಿಬಿರದಲ್ಲಿ ೨೪೮ ಮಂದಿ ಲಸಿಕೆ ಪಡೆದುಕೊಂಡರು. ಇಲ್ಲಿಯವರೆಗೆ ಗ್ರಾಮದ ಶೇ. ೯೮ ರಷ್ಟು ಮಂದಿಗೆ ಮೊದಲ ಹಂತದ ಲಸಿಕೆ ನೀಡಲಾಗಿದೆ. ಇದೇ ಸಂದರ್ಭ ೧೫೧ ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರು.
ಗ್ರಾ.ಪA. ಮಹಿಳಾ ಸದಸ್ಯರುಗಳಾದ ಪುಷ್ಪಲತಾ, ಅನಿತಾ, ಪ್ರಮೀಳಾ, ಆರೋಗ್ಯ ಇಲಾಖೆ ಸಿಬ್ಬಂದಿ ಎಂ.ವೈ. ದೇವಕಿ, ಕೆ.ಸಿ. ಗೀತಾ, ಹರ್ಷಿತ, ಚೇತನ್, ಅನ್ವರ್, ಆಶಾ ಕಾರ್ಯಕರ್ತೆ ಅನಿತಾ ರೈ, ಬಿ.ಎಲ್. ದಿವ್ಯಾ ಮುಖ್ಯ ಶಿಕ್ಷಕಿ ಸರೋಜ ಮತ್ತಿತರರು ಹಾಜರಿದ್ದರು.
ಆರೋಗ್ಯಾಧಿಕಾರಿ ಗೋಪಿನಾಥ್ ಹಾಗೂ ತಾಲೂಕು ಅಧಿಕಾರಿ ಮಂಜುನಾಥ್ ಲಸಿಕೆ ವ್ಯವಸ್ಥೆ ಮಾಡಿದರು. ಗ್ರಾ.ಪಂ. ಅಧ್ಯಕ್ಷ ಕೊಕ್ಕಲೇರ ಅಯ್ಯಪ್ಪ ಹಾಗೂ ಅಭಿವೃದ್ಧಿ ಅಧಿಕಾರಿ ಸೆಲ್ವನ್ ಜಯಕುಮಾರ್ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಗ್ರಾ.ಪಂ. ಮೂಲಕ ಮೂಲಭೂತ ಸೌಲಭ್ಯ ದೊರಕಿಸಿಕೊಟ್ಟರು.