ಮುಳ್ಳೂರು, ಆ. ೫: ವಿಶ್ವ ಪರಿಸರ ಸಂರಕ್ಷಣಾ ದಿನದ ಅಂಗವಾಗಿ ಕೊಡಗು ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತು ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ಅಂಕನಹಳ್ಳಿ ಸರಕಾರಿ ಪ್ರೌಢಶಾಲೆಗೆ ಸೇರಿದ ಜಾಗ ಮತ್ತು ಶಾಲಾ ಕೈತೋಟದಲ್ಲಿ ವಿವಿಧ ಹಣ್ಣು ಹಂಪಲು ಗಿಡಗಳನ್ನು ನೆಡಲಾಯಿತು.

ಮಕ್ಕಳ ಸಹಾಯವಾಣಿ ಕೇಂದ್ರದ ತಾಲೂಕು ಕಾರ್ಯಕರ್ತೆ ಬಿ.ಆರ್. ಕುಮಾರಿ ದಿನದ ಮಹತ್ವದ ಕುರಿತು ಮಾತನಾಡಿದರು. ಅಂಕನಹಳ್ಳಿ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಹೆಚ್.ಎಂ. ಹೇಮಂತ್ ಮಾತನಾಡಿದರು. ಈ ಸಂದರ್ಭ ಆಲೂರು-ಸಿದ್ದಾಪುರ ಗ್ರಾ.ಪಂ. ಸದಸ್ಯರಾದ ಚಂದ್ರು, ಜಯಂತಿ, ಗ್ರಾಮದ ಪ್ರಮುಖರಾದ ನಾಗೇಶ್, ರಂಗಶೆಟ್ಟಿ, ಚೈಲ್ಡ್ಲೈನ್ ಕೇಂದ್ರದ ಎ.ಎಸ್. ಯೋಗೇಶ್, ಎಸ್‌ಡಿಎಂಸಿ ಸದಸ್ಯರು ಮತ್ತು ಶಾಲಾ ಶಿಕ್ಷಕರ ವರ್ಗ ಹಾಜರಿದ್ದರು. ದಿನದ ಪ್ರಯುಕ್ತ ವಿವಿಧ ಗಿಡಗಳನ್ನು ನೆಡಲಾಯಿತು.