ಕೂಡಿಗೆ: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಮುಖ್ಯ ನಾಲೆಗಳ ಮೂಲಕ ಕಳೆದ ೨೦ ದಿನಗಳಿಂದ ನಾಲೆಗಳ ಮುಖೇನ ನೀರನ್ನು ಹರಿಸಲಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ಉಪ ಕಾಲ
Äವೆಗಳ ಮೂಲಕ ಜಮೀನಿಗೆ ನೀರನ್ನು ಹರಿಸಿ, ಅದರ ಬಳಕೆ ಮಾಡಿಕೊಂಡು ಉಳುಮೆ ಮಾಡಿದ್ದಾರೆ. ಭತ್ತದ ಸಸಿ ಮಡಿಗಳಲ್ಲಿ ಇದ್ದ ಭತ್ತದ ಸಸಿಗಳನ್ನು ತೆಗೆದು ನಾಟಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಹಾರಂಗಿಯ ಅಚ್ಚುಕಟ್ಟು ಪ್ರದೇಶವಾದ ಕೊಡಗಿನ ಗಡಿಭಾಗ ಶಿರಂಗಾಲದವರೆಗೆ ಜಿಲ್ಲೆಯ ರೈತರು ಹಾರಂಗಿ ನಾಲೆಯ ನೀರನ್ನು ಉಪಯೋಗಿಸುವ ಮೂಲಕ ಗದ್ದೆಗಳನ್ನು ಉಳುಮೆ ಮಾಡಿ ಹೈಬ್ರಿಡ್ ತಳಿಯ ಸಸಿ ಮಡಿಗಳನ್ನು ತೆಗೆದು ನಾಟಿ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ನಾಪೋಕ್ಲು: ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಭತ್ತದ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿವೆ. ಹಲವೆಡೆ ನಾಟಿ ಕೆಲಸ ಪೂರ್ಣಗೊಂಡಿದೆ. ಇಲ್ಲಿಗೆ ಸಮೀಪದ ಬೇತು ಗ್ರಾಮದಲ್ಲಿ ನಾಟಿ ಕೆಲಸ ಬಿರುಸಿನಿಂದ ಸಾಗಿತು. ಬೇತು ಗ್ರಾಮದ ದಿವಾಕರ ಅವರ ಗದ್ದೆಯಲ್ಲಿ ಕಾರ್ಮಿಕರು ನಾಟಿ ಕಾರ್ಯ ನಡೆಸಿದರು. ಸಾಂಪ್ರದಾಯಿಕವಾಗಿ ನಾಟಿ ನೆಡುವ ಸಂದರ್ಭ ಜನಪದೀಯ ಹಾಡುಗಳನ್ನು ಹಾಡಿ ರಂಜಿಸಿದರು. ನಾಟಿ ಪೂರ್ಣಗೊಳ್ಳುವ ಸಂದರ್ಭ ಗಣಪತಿಗೆ ಪೂಜೆ ಸಲ್ಲಿಸಲಾಯಿತು. ಕಾವೇರಿ ನದಿ ತಟದ ಭತ್ತದ ಗದ್ದೆಗಳಲ್ಲಿ ತಡವಾಗಿ ನಾಟಿ ಕೆಲಸ ನಡೆಯಲಿದೆ.