ಮಡಿಕೇರಿ, ಆ. ೬: ಕೊರೊನಾ ನಿರ್ಬಂಧ ಹಾಗೂ ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿಲುಗಡೆಗೊಂಡಿದ್ದ ಖಾಸಗಿ ಬಸ್ ಸಂಚಾರ ನಿಧಾನವಾಗಿ ಆರಂಭಗೊಳ್ಳುತ್ತಿದೆ. ಪ್ರಸ್ತುತ ಸುಮಾರು ೩೦ ರಿಂದ ೩೨ ಬಸ್ಗಳು ಸಂಚಾರವನ್ನು ಪುನರಾರಂಭಿಸಿವೆ. ಜಿಲ್ಲೆಯಲ್ಲಿ ಖಾಸಗಿ ಬಸ್ಗಳ ಸೇವೆ ಮಹತ್ವವಾಗಿದ್ದು, ಲಾಕ್ಡೌನ್ ಕಾರಣದಿಂದಾಗಿ ಹಲವಷ್ಟು ಸಮಯ ಎಲ್ಲಾ ಬಸ್ಗಳು ಇಲಾಖೆಗೆ ಶರಣಾಗತಿಯಲ್ಲಿದ್ದು. ಜಿಲ್ಲೆಯಲ್ಲಿ ಒಟ್ಟು ೧೪೯ ಖಾಸಗಿ ಬಸ್ಗಳ ಸಂಚಾರವಿದ್ದು, ಪ್ರಸ್ತುತ ೩೨ ರಷ್ಟು ಬಸ್ಗಳು ಮತ್ತೆ ರಸ್ತೆಗಿಳಿದಿರುವದಾಗಿ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ತಿಳಿಸಿದ್ದಾರೆ.
ಕಳೆದ ವರ್ಷ ಕೊರೊನಾ ಲಾಕ್ಡೌನ್ ಸಂದರ್ಭವೂ ಎಲ್ಲಾ ಬಸ್ಗಳು ನಿಲುಗಡೆಯಾಗಿತ್ತು. ಬಳಿಕ ಪರಿಸ್ಥಿತಿ ತಿಳಿಯಾಗುತ್ತಿದ್ದಂತೆ ನಿಧಾನಗತಿಯಲ್ಲಿ ೧೪೯ ಬಸ್ಗಳ ಪೈಕಿ ೧೧೭ ಬಸ್ಗಳು ಸಂಚಾರ ಆರಂಭಿಸಿತ್ತು. ಆದರೆ ಇದರ ಬೆನ್ನಲ್ಲೇ ಮತ್ತೆ ಕೊರೊನಾ ಪರಿಸ್ಥಿತಿ ಬಿಗಡಾಯಿಸಿದ್ದು, ಲಾಕ್ಡೌನ್ನಿಂದ ಮತ್ತೆ ಸಂಚಾರ ಸ್ಥಗಿತಗೊಂಡಿತ್ತು.ದೇಶದ ಹಲವು ರಾಜ್ಯಗಳಲ್ಲಿ ಖಾಸಗಿ ಬಸ್ ಸೇವೆಗೆ ಸಂಬAಧಿಸಿದAತೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಯಾವದೇ ವಿನಾಯಿತಿ ಲಭ್ಯವಾಗಿಲ್ಲ. ಬಸ್ಗಳು ಶರಣಾಗತಿಯಲ್ಲಿರುವ ಸಂದರ್ಭ ಮಾತ್ರ ವಿನಾಯಿತಿ ನೀಡಲಾಗುತ್ತದೆ. ಇದು ಮೋಟಾರು ಅಧಿನಿಯಮದಲ್ಲಿ ಸಹಜವಾದ ಕಾನೂನಾಗಿದೆ. ಆದರೆ ಯಾವದೇ ವಿಶೇಷ ವಿನಾಯಿತಿ ಬಸ್ ಮಾಲೀಕರಿಗೆ ಈ ತನಕ ರಾಜ್ಯದಲ್ಲಿ ದೊರೆತಿಲ್ಲ. ತೆರಿಗೆ ಕಾರಣ ಸೇರಿದಂತೆ ಅಧಿಕ ನಿರ್ವಹಣಾ ವೆಚ್ಚದಿಂದ ಬಸ್ಮಾಲೀಕರು ಸಂಚಾರ ಪ್ರಾರಂಭಿಸಲು ಹಿಂದೇಟು ಹಾಕುತ್ತಿರುವದಾಗಿ ರಮೇಶ್ ಜೋಯಪ್ಪ ಹೇಳಿದ್ದಾರೆ.