ಸುAಟಿಕೊಪ್ಪ, ಆ.೬: ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಆಗಸ್ಟ್ ಕೊನೆಯವರೆಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೂ ಟ್ಯಾಂಕರ್, ಟಿಂಬರ್ ದಿಮ್ಮಿ ಹೊತ್ತ ಲಾರಿಗಳ ಸಂಚಾರ ಅಲ್ಲಲ್ಲಿ ಕಂಡು ಬರುತ್ತಿದೆ.

ಐಗೂರು ಗ್ರಾಮ ಪಂಚಾಯಿತಿಯಿAದ ಐಗೂರು ಜಂಕ್ಷನ್‌ನಿAದ ಕಾಜೂರು, ಯಡವಾರೆ, ಯಡವನಾಡು ರಸ್ತೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಿದೆ ಎಂದು ನಾಮಫಲಕ ಹಾಕಲಾಗಿದೆ. ಆದರೂ ಐಗೂರಿನಿಂದ ಟಿಂಬರ್ ದಿಮ್ಮಿಯನ್ನು ಹಗಲಿನಲ್ಲಿ ಸಾಗಿಸುತ್ತಿರುವುದು ಪಂಚಾಯಿತಿ ಗಮನಕ್ಕೆ ಬಾರದಿರುವುದು ಅಚ್ಚರಿ ಮೂಡಿಸಿದೆ.