ಚೆಟ್ಟಳ್ಳಿ, ಆ. ೬: ಗ್ರಾಮ ಪಂಚಾಯಿತಿಯ ಕಂಡಕರೆ ವಾರ್ಡ್ನಲ್ಲಿ ೧೪ನೇ ಹಣಕಾಸು ಅನುದಾನದಡಿಯಲ್ಲಿ ನಡೆಯುತ್ತಿರುವ ಚರಂಡಿಗೆ ಸ್ಲ್ಯಾಬ್ ಅಳವಡಿಕೆ ಕಾಮಗಾರಿಯನ್ನು ಕಂಡಕರೆ ವಾರ್ಡ್ನ ಗ್ರಾಮ ಪಂಚಾಯಿತಿ ಸದಸ್ಯ ಸಿ.ಈ. ತೀರ್ಥಕುಮಾರ್ ಪರಿಶೀಲನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಅವರು ವಿವಿಧ ಅನುದಾನವನ್ನು ಬಳಸಿ ಗ್ರಾಮವನ್ನು ಅಭಿವೃದ್ಧಿಗೊಳಿಸಲಾಗುವುದು. ಇದೀಗ ಚರಂಡಿಗಳಿಗೆ ಸ್ಲ್ಯಾಬ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, ಗ್ರಾಮಸ್ಥರು ಅಭಿವೃದ್ಧಿಗೆ ಕೈ ಜೋಡಿಸುತ್ತಿದ್ದಾರೆ ಎಂದರು. ಈ ಸಂದರ್ಭ ಗ್ರಾಮಸ್ಥರಾದ ಶುಕೂರ್, ಉನೈಸ್, ಸುಹೈಲ್ ಹಾಗೂ ಮುರಳಿ ಇದ್ದರು.