ಆರ್. ಜ್ಯೋತಿಕೃಷ್ಣನ್

ಮಡಿಕೇರಿ, ಆ. ೬: ಕೋವಿಡ್ ಸಂಕಷ್ಟ ಸಮಯದಲ್ಲಿ ಕೊಡಗು ಜಿಲ್ಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿಗಳು ಗ್ರಾಹಕರ ಸೇವೆ ಸಲ್ಲಿಸಿದ ರೀತಿ, ಕರ್ತವ್ಯ ನಿಷ್ಠೆ ಸ್ತುತ್ಯಾರ್ಹ ಎಂದು ಜಿಲ್ಲಾ ಲೀಡ್ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ಕ್ಷೇತ್ರದ ಕ್ಷೇತ್ರಿಯ ಮುಖ್ಯಸ್ಥ ಆರ್. ಜ್ಯೋತಿಕೃಷ್ಣನ್ ಹೇಳಿದರು.

ಮಡಿಕೇರಿ ಲೀಡ್ ಬ್ಯಾಂಕ್ ಕಾರ್ಯಾಲಯದಲ್ಲಿ ಆಯೋಜಿಸ ಮತ್ತು ಆರ್ಥಿಕ ನೆರವಿನ ಮೂಲಕ ಗ್ರಾಹಕರ ಮೆಚ್ಚುಗೆಗಳಿಸಿದ್ದಾರೆ. ಇಂಥಹ ಕಾರ್ಯಗಳಿಂದಾಗಿಯೇ ಕೊಡಗಿನಲ್ಲಿ ಗ್ರಾಹಕರು ಮತ್ತು ಬ್ಯಾಂಕಿAಗ್ ಕ್ಷೇತ್ರದಲ್ಲಿರುವವರ ನಡುವೆ ಆತ್ಮೀಯ ಬೆಸುಗೆ ಮುಂದುವರೆದಿದೆ ಎಂದರು.

ತದನಂತರ ಸಭೆಯಲ್ಲಿ ಹಾಜರಿದ್ದ ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿಗಳ ಜೀವನ ಜ್ಯೋತಿ ವಿಮಾ ಯೋಜನೆ, ಸುರಕ್ಷಾ ವಿಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆಗಳ ಕುರಿತಂತೆ ವಿವರವಾದ ಮಾಹಿತಿಯನ್ನು ನೀಡಲಾಯಿತು. ಜೊತೆಯಲ್ಲಿ ಪ್ರಧಾನ ಮಂತ್ರಿಗಳ ಆತ್ಮನಿರ್ಭ ರತೆಯ ಅಡಿಯಲ್ಲಿ ನೀಡಲಾಗುವ ಬೀದಿ ಬದಿ ವ್ಯಾಪಾರಸ್ಥರ ಸಾಲ ಯೋಜನೆಯ ಮೊದಲನೆಯ ಹಂತದ ಸಾಲ ಪಡೆದವರಿಗೆ ಮಂಜೂರಾತಿ ಪತ್ರವನ್ನು ವಿತರಿಸ ಲಾಯಿತು ಹಾಗೂ ಎರಡನೆಯ ಅವತರಣಿಕೆಯ ಕುರಿತಾಗಿ ಸಮಗ್ರ ಮಾಹಿತಿಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಬಿ.ಐ. ವ್ಯವಸ್ಥಾಪಕ ದಿನೇಶ್ ಪೈ, ಕೆನರಾ ಬ್ಯಾಂಕ್ ವಲಯ ಕಚೇರಿ ವ್ಯವಸ್ಥಾಪಕ ಸುರೇಶ್ ವಾಗೂಲ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ರಮೇಶ್ ಸೇರಿದಂತೆ ಬ್ಯಾಂಕ್ ಅಧಿಕಾರಿಗಳು ಹಾಜರಿದ್ದರು. ಲೀಡ್ ಬ್ಯಾಂಕ್ ಮುಖ್ಯಸ್ಥರು ವಂದಿಸಿದರು.