ಕೂಡಿಗೆ, ಆ. ೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು-ಯಲಕನೂರು ರಸ್ತೆಯು ಭಾರೀ ಲಾರಿಗಳ ಓಡಾಟದಿಂದಾಗಿ ತೀರಾ ಹಾಳಾಗಿ ಸಂಚರಿಸಲು ಸಾಧ್ಯವಾಗದಂತ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಭಾರೀ ಮಳೆ ನಡುವೆ ರಸ್ತೆಯು ತೀರಾ ಗುಂಡಿಮಯವಾಗಿದೆ.
ಈ ರಸ್ತೆಯು ಲೋಕೋಪಯೋಗಿ ಇಲಾಖೆಯ ಅಧೀನಕ್ಕೆ ಒಳಪಟ್ಟಿದೆ. ಅಲ್ಲದೆ ಈ ರಸ್ತೆಯು ಕೂಡಿಗೆ - ಮದಲಾಪುರ ಮೂಲಕವಾಗಿ ಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ ಮಾತನಾಡಿ, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಮತ್ತು ಕೋವಿಡ್ ಸಂಕಷ್ಟದ ಸಂದರ್ಭಗಳಲ್ಲಿಯೂ ಕೊಡಗಿನಾದ್ಯಂತ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿಗಳು ಸೇವೆ ಸೋಮವಾರಪೇಟೆಗೆ ತೆರಳಲು ಹತ್ತಿರದ ಮಾರ್ಗವಾಗಿದೆ. ಈ ರಸ್ತೆಯ ವ್ಯಾಪ್ತಿಗೆ ೧೦ ಉಪ ಗ್ರಾಮ ಬರುತ್ತವೆ. ಇಲ್ಲಿನ ಗ್ರಾಮಸ್ಥರು ಇದೇ ರಸ್ತೆಯ ಮೂಲಕ ಕೂಡಿಗೆ ಮತ್ತು ಕುಶಾಲನಗರ ತಾಲೂಕು ಕೇಂದ್ರಕ್ಕೆ ಬರಬೇಕಾಗಿದೆ.
ಸಂಬAಧಿಸಿದ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ಭಾರೀ ಸುಸಜ್ಜಿತವಾದ ಕಾಂಕ್ರಿಟ್ ರಸ್ತೆಯನ್ನು ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಲೋಕೋಪಯೋಗಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಕೂಡಿಗೆ ಗ್ರಾಮ ಪಂಚಾಯಿತಿ ಸೀಗೆಹೊಸೂರು ವಾರ್ಡ್ನ ಸದಸ್ಯ ಅನಂತ್ ತಿಳಿಸಿದ್ದಾರೆ.