ಗೋಣಿಕೊಪ್ಪಲು, ಆ. ೬: ಅನೇಕ ವರ್ಷಗಳಿಂದ ಕಾಡುತುಂಬಿದ್ದ ಹಿಂದೂ ರುದ್ರಭೂಮಿಯ ರಕ್ಷಣೆಗೆ ಹಾತೂರು ಗ್ರಾಮ ಪಂಚಾಯಿತಿ ಮುಂದಾಗಿದೆ. ಪರಿಶಿಷ್ಟ ಜಾತಿ, ಪಂಗಡದವರ ಅಂತ್ಯಕ್ರಿಯೆಗೆ ಮೀಸಲಾಗಿರುವ ಈ ಹಿಂದೂ ರುದ್ರಭೂಮಿಯನ್ನು ಕಾನೂನು ಬಾಹಿರವಾಗಿ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಮನಗಂಡ ಪಂಚಾಯಿತಿಯ ಅಧ್ಯಕ್ಷ ಕುಪ್ಪಂಡ ಗಿರೀಶ್ ಪೂವಣ್ಣ ಈ ಬಗ್ಗೆ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದರು.
ಗೋಣಿಕೊಪ್ಪ, ವೀರಾಜಪೇಟೆ ಮುಖ್ಯ ರಸ್ತೆಯ ಬದಿಯಲ್ಲಿ ಈ ರುದ್ರಭೂಮಿಯಿದ್ದು, ರಾತ್ರಿಯ ವೇಳೆ ಯಾರ ಗಮನಕ್ಕೂ ಬಾರದ ರೀತಿಯಲ್ಲಿ ಕೆಲವರು ಅಂತ್ಯಸAಸ್ಕಾರ ನೆರವೇರಿಸಿ ತೆರಳುತ್ತಿದ್ದರು. ಈ ವಿಷಯವು ಆಡಳಿತ ಮಂಡಳಿಯ ಸದಸ್ಯರು ಗಂಭೀರವಾಗಿ ಚರ್ಚಿಸಿ ಹಿಂದೂ ರುದ್ರಭೂಮಿಯನ್ನು ಉಳಿಸಿಕೊಳ್ಳುವ ಸಲುವಾಗಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೂ.೧ ಲಕ್ಷ ಹಣವನ್ನು ಮೀಸಲಿಟ್ಟು ಅಭಿವೃದ್ಧಿ ಮಾಡಲು ಸರ್ವಾನುಮತದ ತೀರ್ಮಾನ ಕೈಗೊಂಡರು.
ಇದೀಗ ನಿಗದಿತ ಜಾಗದಲ್ಲಿ ಬೆಳೆದಿದ್ದ ಕಾಡುಗಳನ್ನು ಕಡಿದು ಜಾಗದ ಸುತ್ತಲೂ ತಂತಿ ಬೇಲಿ ನಿರ್ಮಿಸಿ ಗೇಟ್ ಅಳವಡಿಸುವ ಕೆಲಸಕ್ಕೆ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಪಂಚಾಯಿತಿ ಅಧ್ಯಕ್ಷ ಗಿರೀಶ್ ಪೂವಣ್ಣ ಈ ರುದ್ರಭೂಮಿಯನ್ನು ನಿರ್ವಾಹಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸರ್ಕಾರಿ ಜಾಗಗಳನ್ನು ಪರಿಶೀಲಿಸಿ ಪಂಚಾಯಿತಿ ಅಭಿವೃದ್ಧಿಗೆ ಮೀಸಲಿಡಲಾಗುವುದು. ಗ್ರಾಮದ ಜನತೆ ಸಹಕರಿಸುವಂತೆ ಮನವಿ ಮಾಡಿದರು. ಈ ವೇಳೆ ಸದಸ್ಯರಾದ ಜಮ್ಮಡ ಲವ, ಕೊಕ್ಕಂಡ ನಮಿತಾ, ವಿಷ್ಮ, ಮುತ್ತುರಾಜ್, ರೇಖಾ, ಆರ್ಎಂಸಿ ಸದಸ್ಯರಾದ ಚೀಯಕ್ಪೂವಂಡ ಸುಬ್ರಮಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಸ್ಮಾ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.
-ಹೆಚ್.ಕೆ. ಜಗದೀಶ್