ಮಡಿಕೇರಿ, ಆ. ೬: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಈಸ್ಟ್ ನೆಮ್ಮಲೆ ಗ್ರಾಮದ ಪಣಿಯರವರ ಬೆಪ್ಪ ಅವರ ಪುತ್ರ ಪಣಿ ಯರವರ ಚಿಪ್ಪ (೧೮) ನಾಪತ್ತೆಯಾಗಿರುವ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈಸ್ಟ್ ನೆಮ್ಮಲೆಯ ದಿನೇಶ್ ಅವರ ತೋಟದಲ್ಲಿ ಕೂಲಿ ಕೆಲಸ ಮಾಡುವ ಬೆಪ್ಪ ಅಲ್ಲಿನ ಲೈನ್ ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಪುತ್ರರೊಂದಿಗೆ ವಾಸವಿದ್ದು, ಓರ್ವ ಪುತ್ರ ಚಿಪ್ಪ ೨೦೨೦ ನವೆಂಬರ್ ೩೧ ರಂದು ಮನೆಯಿಂದ ತೆರಳಿದವನು ಇನ್ನೂ ಹಿಂತಿರುಗಲಿಲ್ಲ ಎಂದು ಚಿಪ್ಪನ ತಂದೆ ಬೆಪ್ಪ ಅವರು ಠಾಣೆಯಲ್ಲಿ ದೂರು ನೀಡಿದ್ದಾರೆ.

ಚಿಪ್ಪ ಕುರಿತು ಮಾಹಿತಿ ದೊರೆತ್ತಲ್ಲಿ ದೂ. ೦೮೨೭೪-೨೪೬೨೪೬ ಗೆ ಮಾಹಿತಿ ನೀಡಲು ಪೊಲೀಸ್ ಪ್ರಕಟಣೆ ತಿಳಿಸಿದೆ.