ಮಡಿಕೇರಿ, ಆ. ೬: ಭಾರತ ಮಹಿಳಾ ಹಾಕಿ ತಂಡ ಈ ಬಾರಿಯ ಒಲಂಪಿಕ್ಸ್ನಲ್ಲಿ ಪದಕ ಗಳಿಸುವ ಸನಿಹಕ್ಕೆ ಬಂದರೂ ಪದಕ ಪಡೆಯಲಾಗಲಿಲ್ಲ ಎಂಬ ವ್ಯಥೆ ಒಂದೆಡೆಯಿದೆ. ಆದರೂ ತಂಡ ಗೆದ್ದಿದೆ ಎಂಬ ತೃಪ್ತಿ ಇರುವದಾಗಿ ಭಾರತ ಮಹಿಳಾ ಹಾಕಿ ತಂಡದ ಓರ್ವ ಕೋಚ್ ಆಗಿ ಟೋಕಿಯೋಕ್ಕೆ ತೆರಳಿದ್ದ ಜಿಲ್ಲೆಯವರಾದ ಕಂಬಿಬಾಣೆಯ ಬಿ.ಎಸ್. ಅಂಕಿತಾ (ಹೊನ್ನಂಪಾಡಿ) ಅವರು ಅಭಿಪ್ರಾಯಪಟ್ಟರು.
ಭಾರತ ಹಾಕಿ ತಂಡದ ಸಾಧನೆಯ ಕುರಿತಾಗಿ ‘ಶಕ್ತಿ’ ಯೊಂದಿಗೆ ಇಂದು ಟೋಕಿಯೋ ದಿಂದ ಪ್ರತಿಕ್ರಿಯಿಸಿದ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಬಾರಿ ಭಾರತೀಯ ಹಾಕಿ ಹೆಚ್ಚಿನ ಪ್ರೋತ್ಸಾಹ ಕಾಣುವಂತಾಗಿದೆ, ಮಹಿಳಾ ತಂಡ ಹಾಗೂ ಪುರುಷರ ತಂಡಗಳೆರಡೂ ಗಮನಾರ್ಹ ಸಾಧನೆಯನ್ನು ಮಾಡಿದೆ. ಪುರುಷರ ತಂಡ ಕಂಚಿನ ಪದಕ ಗಳಿಸಿರುವದು ತೃಪ್ತಿ ಇದೆ. ಇದರೊಂದಿಗೆ ಮಹಿಳಾ ತಂಡದ್ದು, ಈ ಬಾರಿ ವಿಶೇಷವಾದ ಸಾಧನೆಯಾಗಿದೆ. ಅರ್ಹತೆ ಪಡೆದಿದ್ದು, ಕ್ವಾರ್ಟರ್ ಫೈನಲ್ - ಸೆಮಿಫೈನಲ್ ಪ್ರವೇಶದೊಂದಿಗೆ ನಿರ್ಣಾಯಕ ಪಂದ್ಯದಲ್ಲಿ ಸೋಲು ಅನುಭವಿಸಿದರೂ ಪದಕದ ಸುತ್ತು ತಲುಪಿದ್ದು, ಐತಿಹಾಸಿಕ ದಾಖಲೆಯಾಗಿದೆ. ಆರಂಭದ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದರೂ ತಂಡದ ವನಿತೆಯರು ಪುಟಿದೆದ್ದರು. ಆಸ್ಟೆçÃಲಿಯಾದಂತಹ ಪ್ರಬಲ ತಂಡವನ್ನು ಮಣಿಸಿದ್ದು, ತಂಡಕ್ಕೆ ಭಾರೀ ಚೇತೋಹಾರಿಯಾಯಿತು. ಮಹಿಳಾ ತಂಡಕ್ಕೆ ಇದು ಮೂರÀನೇ ಒಲಂಪಿಕ್ಸ್ ಆಗಿದ್ದು, ತಂಡದ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ಅಂಕಿತಾ ನುಡಿದರು.
ಹೆಮ್ಮೆಯ ಭಾವನೆ
ಭಾರತದ ಪುರುಷ - ಮಹಿಳಾ ತಂಡದ ಸಾಧನೆ ಬಗ್ಗೆ ದೇಶದ ಪ್ರಧಾನಿಗಳಿಂದ ಹಿಡಿದು ಇಡೀ ದೇಶದೆಲ್ಲೆಡೆ ಅಭಿಮಾನ ಕಂಡುಬರುತ್ತಿರುವದು ತಂಡದ ಎಲ್ಲಾ ಸದಸ್ಯರಿಗೂ ಭಾರೀ ಪ್ರೋತ್ಸಾಹ ದಾಯಕವಾಗಿದ್ದು, ಸಾರ್ಥಕತೆಯ ಭಾವ ಮೂಡಿಸಿದೆ ಎಂದ ಅಂಕಿತಾ ಇದು ಮುಂದಿನ ದಿನಗಳಲ್ಲಿ ತಂಡವನ್ನು ಮತ್ತಷ್ಟು ಸದೃಢಗೊಳಿಸಲು ಪ್ರೇರಣೆಯಾಗಿವೆ ಎಂದರು.
ಕೊಡಗು ಹಾಕಿ ಭೂಮಿ
ಕೊಡಗು ದೇಶದಲ್ಲಿ ಹಾಕಿ ಭೂಮಿಯಾಗಿದೆ. ಈ ತನಕ ಭಾರತ ತಂಡದಲ್ಲಿ ಕೊಡಗಿನವರು ಇದ್ದೆ ಇರುತ್ತಿದ್ದರು. ಆದರೆ ಈ ಬಾರಿ ಯಾರೂ ಇಲ್ಲದಿರುವದು ನೋವು ಉಂಟು ಮಾಡಿತ್ತು. ಆದರೂ ಕೊಡಗಿನ ಮಹಿಳೆಯಾಗಿ ತರಬೇತು ದಾರಳಾಗಿಯಾದರೂ ಒಲಂಪಿಕ್ಸ್ನಲ್ಲಿ ಭಾಗವಹಿಸಲು ತಮಗೆ ಅವಕಾಶ ದೊರೆತಿರುವದು ಅತೀವ ಸಂತಸವಾಗಿದೆ. ಈ ಮೂಲಕ ಹಾಕಿಗೂ - ಕೊಡಗಿಗೂ ಇರುವ ಸಂಬAಧ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಕೊಡಗಿನವರು ಭಾರತ ತಂಡಕ್ಕೆ ಪುರುಷ ಹಾಗೂ ಮಹಿಳಾ ತಂಡಗಳೆರಡಕ್ಕೂ ಸೇರ್ಪಡೆಗೊಳ್ಳುವಂತಾಗಲಿ ಎಂದು ಆಶಿಸಿದ ಅಂಕಿತಾ ತಾವೂ ಕೂಡ ಈ ನಿಟ್ಟಿನಲ್ಲಿ ಅಗತ್ಯ ಪರಿಶ್ರಮ ತರಬೇತಿ ನೀಡಲು ಬದ್ಧರಾಗಿರುವದಾಗಿ ಹೇಳಿದರು. ಕೊಡಗು ಹಾಕಿ ಭೂಮಿಯಾಗಿದ್ದು, ಇಲ್ಲಿಂದ ತಮಗೆ ಈ ಪ್ರತಿಷ್ಠಿತ ಒಲಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು, ಸ್ಮರಣೀಯ ಎಂಬದು ಅವರ ಮನದಾಳವಾಗಿದೆ.
- ಶಶಿ ಸೋಮಯ್ಯ