ಟೋಕಿಯೋ, ಆ. ೬: ಒಲಂಪಿಕ್ ಹಾಕಿಯಲ್ಲಿ ಮೊದಲನೆಯ ಬಾರಿಗೆ ಸೆಮಿಫೈನಲ್ ತಲುಪಿ ಇತಿಹಾಸ ಸೃಷ್ಟಿಸಿದ ಭಾರತ ಮಹಿಳೆಯರ ಹಾಕಿ ತಂಡ ಚೊಚ್ಚಲ ಪದಕ ಪಡೆಯುವಲ್ಲಿ ವಿಫಲವಾಯಿತು. ಕಳೆದ ಒಲಂಪಿಕ್ಸ್ನ ಚಿನ್ನದ ಪದಕ ವಿಜೇತ ಬ್ರಿಟನ್ ತಂಡದ ವಿರುದ್ಧ ಅತ್ಯುತ್ತಮ ಆಟ ಪ್ರದರ್ಶಿಸಿದರೂ ಕೇವಲ ೧ ಗೋಲಿನ ಅಂತರದಲ್ಲಿ ಸೋಲು ಅನುಭವಿಸುವ ಮೂಲಕ ಭಾರತೀಯರ ಆಸೆ ಕೈಗೂಡಲಿಲ್ಲ.

ನಿನ್ನೆ ಪುರುಷರ ತಂಡ ಕಂಚು ಗೆದ್ದ ಬಳಿಕ ಇಂದು ಮಹಿಳೆಯರು ಕೂಡ ಕಂಚು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸುವ ಕ್ಷಣಕ್ಕೆ ದೇಶವೇ ಕಾಯುತ್ತಿತ್ತು. ಇದನ್ನು ನನಸು ಮಾಡುವತ್ತ ಮಹಿಳಾ ಆಟಗಾರರು ಸಾಗಿದ್ದು, ಮೊದಲಿಗೆ ೦-೨ ಗೋಲುಗಳಿಂದ ಹಿನ್ನಡೆ ಸಾಧಿಸಿದ್ದರೂ ಪಂದ್ಯದ ೨ನೇ ಕ್ವಾರ್ಟರ್‌ನ ಕೊನೆಯ ೫ ನಿಮಿಷಗಳಲ್ಲಿ ೩ ಗೋಲುಗಳನ್ನು ಭಾರಿಸಿ ಆಶಾಭಾವನೆ ಮೂಡಿಸಿತ್ತು. ಆದರೆ ಅಂತಿಮವಾಗಿ ಬ್ರಿಟನ್ ತಂಡ ಮತ್ತೆರಡು ಗೋಲುಗಳನ್ನು ಭಾರಿಸಿ ೪-೩ ಗೋಲುಗಳಿಂದ ಜಯ ಸಾಧಿಸಿ ಕಂಚಿನ ಪದಕ ಪಡೆದುಕೊಂಡಿತು.

ನೆದರ್‌ಲ್ಯಾAಡ್ ಚಾಂಪಿಯನ್

ಫೈನಲ್ ಪಂದ್ಯದಲ್ಲಿ ನೆದರ್‌ಲ್ಯಾಂಡ್ ಹಾಗೂ ಅರ್ಜೆಂಟೀನಾ ನಡುವೆ ಆಗಿದ್ದು, ಚಾಂಪಿಯನ್ ಆಗಿ ನೆದರ್‌ಲ್ಯಾಂಡ್ ಹೊರಹೊಮ್ಮಿತು. ಅರ್ಜೆಂಟೀನಾ ಬೆಳ್ಳಿ ಪದಕ ಪಡೆದುಕೊಂಡಿತು.