ಕೂಡಿಗೆ, ಆ. ೪: ಕುಶಾಲನಗರ ತಾಲೂಕು ವ್ಯಾಪ್ತಿಯ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯು ಅರೆಮಲೆನಾಡು ಪ್ರದೇಶವಾಗಿದ್ದು ಈ ಭಾಗದಲ್ಲಿ ಹೆಚ್ಚು ಮುಸುಕಿನ ಜೋಳದ ಬೆಳೆಯನ್ನು ಬೆಳೆಯಲಾಗುತ್ತದೆ. ಈ ಸಾಲಿನಲ್ಲಿ ಉತ್ತಮವಾಗಿ ಸಕಾಲಿಕ ಮಳೆಯಾದ ಹಿನ್ನೆಲೆಯಲ್ಲಿ ಮುಸುಕಿನ ಜೋಳದ ಬೆಳೆಯು ಉತ್ತಮವಾಗಿ ಬೆಳೆದಿದೆ.
ತೊರೆನೂರು, ಶಿರಂಗಾಲ, ಹೆಬ್ಬಾಲೆ, ಕೂಡಿಗೆ, ಸಿದ್ದಲಿಂಗಪುರ, ಅಳುವಾರ, ಸೀಗೆಹೊಸೂರು, ಮದಲಾಪುರ, ಅಬ್ಬೂರುಕಟ್ಟೆ, ವ್ಯಾಪ್ತಿಯಲ್ಲಿ ಸಾವಿರಾರು ಎಕರೆಗಳಷ್ಟು ಪ್ರದೇಶದಲ್ಲಿ ಈ ಭಾಗದ ರೈತರು ಮಳೆಯನ್ನೇ ಅವಲಂಭಿಸಿ ಜೋಳ ಬೆಳೆಯನ್ನು ಬೆಳೆಸಿದ್ದಾರೆ. ಬೆಳೆಯು ಈ ಸಾಲಿನಲ್ಲಿ ಉತ್ತಮವಾಗಿದ್ದು, ಈಗಾಗಲೇ ಕಾಳು ಕಟ್ಟಲು ಜೋಳ ಮಾತ್ತೆ ಬಿಡಲು ಪ್ರಾರಂಭವಾಗಿದೆ.
ಈ ವ್ಯಾಪ್ತಿಯಲ್ಲಿ ಮಣ್ಣಿನ ಅನುಗುಣವಾಗಿ ಮತ್ತು ಮಳೆಯ ಪ್ರಮಾಣದ ಆಧಾರಿತವಾಗಿ ಆಯಾ ರೈತರು ತಮ್ಮ ಜಮೀನಿಗೆ ಬೇಕಾಗುವ ಹೈಬ್ರೀಡ್ ತಳಿಯ ಮುಸುಕಿನ ಜೋಳ ಮತ್ತು ಅದಕ್ಕೆ ಹಾಕುವ ರಸಗೊಬ್ಬರ ಮತ್ತು ಸಾವಯವ ಗೊಬ್ಬರವನ್ನು ಸಹಕಾರ ಸಂಘಗಳಿAದ ಮತ್ತು ಸ್ಥಳೀಯ ಖಾಸಗಿ ಅಂಗಡಿಗಳಿAದ ಖರೀದಿಸಿ ಬಿತ್ತನೆ ಮಾಡಲಾಗಿತ್ತು. ಹದವಾದ ಮಳೆಯಿಂದಾಗಿ ಈ ಭಾಗದಲ್ಲಿ ಉತ್ತಮವಾದ ಬೆಳೆ ಬಂದಿರುತ್ತದೆ.