ಮಡಿಕೇರಿ, ಆ. ೪: ಸುಂಟಿಕೊಪ್ಪ ಪನ್ಯ ಎಸ್ಟೇಟ್ನ ಮೂವತ್ತು ಕುಟುಂಬಗಳಿಗೆ ದಲಿತ ಸಂಘರ್ಷ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು. ಬಳಿಕ ಮಾತನಾಡಿದ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಅವರು ಜಿಲ್ಲೆಯ ಮೂಲೆಮೂಲೆಗಳಿಗೆ ಸಂಚರಿಸಿ ಬಡವರ್ಗದ ಜನರಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಆಹಾರ ಕಿಟ್ ವಿತರಿಸಲಾಗುತ್ತಿದೆ. ಮುಂದೆಯೂ ವಿವಿಧ ಭಾಗಗಳಲ್ಲಿ ಕಿಟ್ ವಿತರಿಸಲಾಗುವುದು ಎಂದರು.
ಗ್ರಾ.ಪA. ಸದಸ್ಯ ಗೌತಮ್ ಶಿವಪ್ಪ ಮಾತನಾಡಿ, ಜಿಲ್ಲಾ ಸಂಘಟನಾ ಸಂಚಾಲಕ ಐತಪ್ಪ, ಮಡಿಕೇರಿ ನಗರ ಸಂಚಾಲಕ ಸಿದ್ದೇಶ್ವರ ಮತ್ತು ಪ್ರಮುಖರು ಹಾಜರಿದ್ದರು.