ಮಡಿಕೇರಿ, ಆ. ೪: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನಡೆದಿದ್ದ ಸ್ಕೂಟರ್ ಕಳವು ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹದೇವಪೇಟೆಯ ಮಕ್ಕಾನ್ ಗಲ್ಲಿ ಬಳಿ ಜು. ೨೫ ರಂದು ವಿನೋದ್ಕುಮಾರ್ ಎಂಬವರ ಆಕ್ಟೀವಾ ಸ್ಕೂಟರ್ (ಕೆ.ಎ.೧೨ ಕೆ. ೭೩೯೨)ನ್ನು ಯಾರೋ ಕಳ್ಳರು ಕಳವು ಮಾಡಿರುವ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಕಳವು ಆರೋಪಿ ಕುಶಾಲನಗರ ಯೋಗಾನಂದ ಬಡಾವಣೆಯ ಹಣ್ಣು ವ್ಯಾಪಾರಿ ಎಂ.ಎA. ತೌಸೀಫ್ (೩೨) ಎಂಬಾತನನ್ನು ಬಂಧಿಸಿ ೩೫ ಸಾವಿರ ಮೌಲ್ಯದ ಸ್ಕೂಟರನ್ನು ವಶÀಪಡಿಸಿಕೊಂಡಿದ್ದಾರೆ.
ಪೊಲೀಸ್ ಅಧೀಕ್ಷಕಿ ಕ್ಷಮಾಮಿಶ್ರಾ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಗಜೇಂದ್ರ ಪ್ರಸಾದ್ ಜಿ.ಎಸ್., ಮಾರ್ಗದರ್ಶನದಲ್ಲಿ ಮಡಿಕೇರಿ ನಗರ ವೃತ್ತದ ವೃತ್ತ ನಿರೀಕ್ಷಕ ವೆಂಕಟೇಶ್ ನೇತೃತ್ವದಲ್ಲಿ ಮಡಿಕೇರಿ ನಗರ ಪೊಲೀಸ್ ಉಪ ನಿರೀಕ್ಷಕಿ ಅಂತಿಮ, ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಕೆ.ಕೆ. ದಿನೇಶ್, ಪ್ರವೀಣ್ ಬಿ.ಕೆ. ನಾಗರಾಜ್ ಕಡಗನ್ನವರ್, ಸಿಬ್ಬಂದಿಗಳಾದ ಅರುಣ್ಕುಮಾರ್ ಬಿ.ಜಿ. ಸಿ.ವಿ. ರವಿ, ದಿವ್ಯ, ಓಮನ ಇವರುಗಳನ್ನು ಒಳಗೊಂಡ ತಂಡ ಜಿಲ್ಲಾ ಪೊಲೀಸ್ ಕಚೇರಿಯ ಸಿ.ಕೆ. ರಾಜೇಶ್ ಮತ್ತು ಗಿರೀಶ್ ಸಹಕಾರದೊಂದಿಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.