ಮಡಿಕೇರಿ, ಆ. ೪: ನಗರದ ಕಾವೇರಿ ಮಹಲ್ ಕಟ್ಟಡ ನವೀಕರಣ ಸಂಬAಧ ಅಗತ್ಯ ದಾಖಲಾತಿಗಳು ನೀಡದೆಯೇ ಕಾಮಗಾರಿ ನಡೆಸುತ್ತಿರುವ ಸಂಬAಧ ಪರಿಶೀಲನೆಗೆ ತೆರಳಿದಾಗ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರ, ಮೂಡ ಅಧ್ಯಕ್ಷ ರಮೇಶ್ ಹೊಳ್ಳ ಸೇರಿದಂತೆ ನಗರಸಭಾ ಬಿ.ಜೆ.ಪಿ. ಸದಸ್ಯರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದಲ್ಲದೆ ಸದಸ್ಯ ಉಮೇಶ್ ಸುಬ್ರಮಣಿ ಅವರು ತನ್ನಿಂದ ಹಣದ ಬೇಡಿಕೆ ಇಟ್ಟಿದ್ದಾರೆ ಎಂಬ ಸುಳ್ಳು ಆರೋಪ ಮಾಡಿದ್ದಾರೆ ಎಂದು ನಗರ ಬಿ.ಜೆ.ಪಿ ಘಟಕ ಆರೋಪಿಸಿದೆ. ಈ ಸಂಬAಧ ಇಂದು ನಗರ ಬಿ.ಜೆ.ಪಿ ಘಟಕ ಪತ್ರಿಕಾಗೋಷ್ಠಿ ಕರೆದಿದ್ದು ಘಟನೆಯನ್ನು ಖಂಡಿಸಿತು.
ಆರೋಪ ಸತ್ಯವಾದರೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ - ಉಮೇಶ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾವೇರಿ ಮಹಲ್ನಲ್ಲಿ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರ, ನಗರಸಭಾ ಸದಸ್ಯ ಉಮೇಶ್ ಸುಬ್ರಮಣಿ ಅವರು ೫ ಲಕ್ಷ ಹಣದ ಬೇಡಿಕೆ ಇಟ್ಟಿರುವುದಾಗಿ ಗಂಭೀರ ಆರೋಪ ಮಾಡಿದರು. ಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಉಮೇಶ್ ಅವರು ಇದು ಸತ್ಯ ಎಂದು ಸಾಬೀತಾದಲ್ಲಿ ತಾವು ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದರು. ನಂತರ ಮಾತನಾಡಿದ ಮೂಡ ಅಧ್ಯಕ್ಷ ರಮೇಶ್ ಹೊಳ್ಳ ಅವರು, ಕಟ್ಟಡ ಬಹಳ ಹಳೆಯದ್ದಾಗಿರುವುದರಿಂದ ನವೀಕರಣ ಮಾಡುವುದಾದರೆ ಅಗತ್ಯ ದಾಖಲಾತಿಗಳೊಂದಿಗೆ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು. ಆದರೆ ಮಾಲೀಕರು ಕೇವಲ ಅರ್ಜಿ ನೀಡಿದ್ದಾರೆ ಹೊರತು, ಕಟ್ಟಡ ದಾಖಲಾತಿಗಳನ್ನು ಇನ್ನೂ ಕೂಡ ನೀಡದೆ ಮೂಡ ಅನುಮತಿ ಇಲ್ಲದೆಯೇ ಕಾಮಗಾರಿ ನಡೆಸುತ್ತಿ ದ್ದಾರೆ. ಈ ಹಿಂದೆಯೂ ಇದೆ ರೀತಿ ಮಾಡಿದ್ದು ನೋಟೀಸ್ ನೀಡಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಮತ್ತೆ ಕಾಮಗಾರಿ ನಡೆಸುತ್ತಿದ್ದು ಸಾರ್ವಜನಿಕರ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಲು ಮೂಡಾ, ನಗರಸಭಾ ಅಭಿಯಂತರರು ಸೇರಿದಂತೆ ನಗರಸಭೆ ಸದಸ್ಯರು ತೆರಳಿದಾಗ ಘಟನೆ ನಡೆದಿರುವುದಾಗಿ ವಿವರಿಸಿದರು.
ನಗರ ಬಿ.ಜೆ.ಪಿ. ಅಧ್ಯಕ್ಷ ಮನು ಮಂಜುನಾಥ್, ಕಟ್ಟಡ ಇರುವ ವಾರ್ಡಿನ ಸದಸ್ಯ ಸತೀಶ್ ಹಾಗೂ ಘಟನಾ ಸ್ಥಳದಲ್ಲಿ ಇದ್ದ ಇತರ ಸದಸ್ಯರಾದ ಅಪ್ಪಣ್ಣ, ರಮೇಶ್ ಅವರು ಗಳು ಗುತ್ತಿಗೆದಾರನ ನಡವಳಿಕೆಯನ್ನು ಖಂಡಿಸಿದ್ದು, ಘಟನೆಯ ಸಂಪೂರ್ಣ ವೀಡಿಯೋವನ್ನು ವೈರಲ್ ಮಾಡದೆ ಅರ್ಧಂಬರ್ಧ ವೀಡಿಯೋವನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಇದೊಂದು ವ್ವವಸ್ಥಿತ ಸಂಚು ಎಂದು ಆರೋಪಿಸಿದರು.
ಕಾಮಗಾರಿ ಸ್ಥಗಿತಗೊಳಿಸಲು ಆಯುಕ್ತರಿಗೆ ಅಧಿಕಾರ
ಪ್ರಸ್ತುತ ನಗರಸಭೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಯವರೇ ಕಾರ್ಯನಿರ್ವಹಿಸುತ್ತಿದ್ದಾರೆ. ನಗರದಾದ್ಯಂತ ಬಹಳಷ್ಟು ಕಟ್ಟಡಗಳು ಅನಧಿಕೃತವಾಗಿ ತಲೆ ಎತ್ತುತ್ತಿವೆ. ಈ ಸಂಬAಧ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ಸೂಕ್ತ ಸ್ಪಂದನ ನೀಡುತ್ತಿಲ್ಲ ಎಂದು ರಮೇಶ್ ಹೊಳ್ಳ ಅವರು ಆರೋಪಿಸಿದರು. ಅನುಮತಿ ಇಲ್ಲದೆ ಕಟ್ಟಡ ಕಟ್ಟುವುದನ್ನು ನಿಲ್ಲಿಸುವ ಅಧಿಕಾರ ಪೌರಾಯುಕ್ತರಿಗಿದೆ ಎಂಬುದಾಗಿ ಅವರು ಮಾಹಿತಿ ನೀಡಿದರು.
ಕೌನ್ಸಿಲ್ ಸಭೆಯಲ್ಲಿ ತೀರ್ಮಾನ
ಅನುಮತಿ ಇಲ್ಲದೆ ನವೀಕರಣಗೊಳಿಸುತ್ತಿರುವ ಬಗ್ಗೆ ಮುಂದೆ ಕೌನ್ಸಿಲ್ ಸಭೆಯಲ್ಲೇ ನಿರ್ಣಯ ಕೈಗೊಳ್ಳುತ್ತೇವೆ ಎಂದು ನಗರಸಭಾ ಸದಸ್ಯ ಅರುಣ್ಶೆಟ್ಟಿ ಹೇಳಿದ್ದಾರೆ. ಸದಸ್ಯರ ಮೇಲೆ ಮಾಡಿರುವ ಆರೋಪ ಸುಳ್ಳಾಗಿದ್ದು, ಖಂಡಿಸುವುದಾಗಿ ಹೇಳಿರುವ ಅರುಣ್ ಬಿ.ಜೆ.ಪಿ.ಯ ೧೬ ಸದಸ್ಯರು ಒಗ್ಗಟ್ಟಾಗಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಹಲವರಿಗೆ ನುಂಗಲಾರದ ತುಪ್ಪದಂತಾಗಿದೆ ಎಂದಿದ್ದಾರೆ.