ಸೋಮವಾರಪೇಟೆ, ಆ .೪: ತಾಲೂಕಿನ ಪ್ರವಾಸಿ ತಾಣಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಮಲ್ಲಳ್ಳಿ ಜಲಪಾತಕ್ಕೆ ಪ್ರವೇಶ ನೀಡುವವರಿಂದ ಶುಲ್ಕ ಸಂಗ್ರಹಿಸುವ ವಾರ್ಷಿಕ ಟೆಂಡರ್ ಈ ಬಾರಿ ದಾಖಲೆ ಬರೆದಿದೆ. ಜಲಪಾತಕ್ಕೆ ಭೇಟಿ ನೀಡುವ ಮಂದಿಯಿAದ ಶುಲ್ಕ ಸಂಗ್ರಹಿಸಲು ಗ್ರಾಮ ಪಂಚಾಯಿತಿಯಿAದ ಟೆಂಡರ್ ಕರೆಯಲಾಗಿದ್ದು, ಈ ಬಾರಿ ಬರೋ ಬ್ಬರಿ ೪.೬೦ ಲಕ್ಷಕ್ಕೆ ಹರಾಜಾಗಿದೆ.
ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಲ್ಲಳ್ಳಿ ಜಲಪಾತಕ್ಕೆ ದಿನಂಪ್ರತಿ ನೂರಾರು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದು, ವಾರಾಂತ್ಯದ ದಿನಗಳಲ್ಲಿ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಜಲಪಾತದ ಆವರಣ, ಸುತ್ತಮುತ್ತಲ ಪ್ರದೇಶದಲ್ಲಿ ಶುಚಿತ್ವ, ಶೌಚಾಲಯ ನಿರ್ವಹಣೆ ಸೇರಿದಂತೆ ಇತರ ಸೌಕರ್ಯಗಳನ್ನು ಕಲ್ಪಿಸುವುದು, ಪ್ರವಾಸಿಗರಿಂದ ನಿಗದಿತ ಪ್ರವೇಶ ಶುಲ್ಕ ವಸೂಲಿ ಮಾಡಲು ಗ್ರಾ.ಪಂ.ನಿAದ ವಾರ್ಷಿಕ ಟೆಂಡರ್ ಆಹ್ವಾನಿಸಲಾಗಿತ್ತು.
ಟೆಂಡರ್ ಪ್ರಕ್ರಿಯೆಯಲ್ಲಿ ೨೬ ಮಂದಿ ಭಾಗವಹಿಸಿದ್ದು, ಇದರಲ್ಲಿ ನಗರಳ್ಳಿ ಗ್ರಾಮದ ಕೃಷ್ಣರಾಜು ಅವರು ೪.೬೦ ಲಕ್ಷಕ್ಕೆ ಪ್ರವೇಶ ಶುಲ್ಕ ಎತ್ತಾವಳಿ ಹಕ್ಕನ್ನು ಪಡೆದಿದ್ದಾರೆ. ಈ ಬಾರಿ ೮ ತಿಂಗಳಿಗೆ ಮಾತ್ರ ಹಕ್ಕು ನೀಡಲಾಗಿದ್ದು, ಪ್ರತಿದಿನ ಬೆಳಿಗ್ಗೆ ೮ ಗಂಟೆಯಿAದ ಸಂಜೆ ೫.೩೦ರವರೆಗೆ ಮಾತ್ರ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸುವ ನಿಬಂಧನೆ ಹಾಕಲಾಗಿದೆ.
ಇದರೊಂದಿಗೆ ಜಲಪಾತದ ಸುತ್ತಮುತ್ತ ಕಸ ಹಾಕದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು. ಶೌಚಾಲಯ ನಿರ್ವಹಣೆ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದು. ಪ್ರವಾಸಿಗರು ಜಲಪಾತದ ನೀರಿಗೆ ಇಳಿಯದಂತೆ ಎಚ್ಚರ ವಹಿಸುವುದು. ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಜವಾಬಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ.
ಜಲಪಾತ ವೀಕ್ಷಣೆಗೆ ಆಗಮಿಸುವ ಮಂದಿಯಿAದ ನಿಗದಿ ಪಡಿಸಿದ ಶುಲ್ಕವನ್ನು ಮಾತ್ರ ವಸೂಲಿ ಮಾಡುವಂತೆ ಸೂಚನೆ ನೀಡಲಾಗಿದ್ದು, ಬಸ್ಗೆ ೨೦೦ರೂ., ಮಿನಿ ಬಸ್ಗಳಿಗೆ ರೂ. ೧೫೦, ಟೆಂಪೋ-೧೦೦, ಕಾರು ಮತ್ತು ಜೀಪ್-೫೦, ಬೈಕ್ಗೆ ೨೦, ಆಟೋಗೆ ೩೫, ನಡೆದುಕೊಂಡು ಬರುವವರಿಗೆ ತಲಾ ೧೦ ರೂಪಾಯಿ ಪ್ರವೇಶ ದರ ನಿಗದಿಪಡಿಸಲಾಗಿದೆ.
ಕಳೆದ ಸಾಲಿನಲ್ಲಿ ೨.೧೦ಲಕ್ಷಕ್ಕೆ ಹರಾಜಾಗಿದ್ದ ಪ್ರವೇಶ ಶುಲ್ಕ ಎತ್ತಾವಳಿ ಹಕ್ಕು, ಈ ಬಾರಿ ೪.೬೦ಲಕ್ಷಕ್ಕೆ ಹರಾಜಾಗುವ ಮೂಲಕ ದಾಖಲೆ ನಿರ್ಮಿಸಿದೆ. ಕಳೆದ ಬಾರಿಗಿಂತ ಈ ಬಾರಿ ೨.೫೦ಲಕ್ಷ ಹೆಚ್ಚುವರಿ ಆದಾಯ ಪಂಚಾಯಿತಿಗೆ ಹರಿದುಬಂದಿದೆ.
ಪುಷ್ಪಗಿರಿ ಬೆಟ್ಟಶ್ರೇಣಿಯ ಪ್ರದೇಶಗಳಲ್ಲಿ ಮಳೆ ಮುಂದು ವರೆದಿದ್ದು, ಜಲಪಾತ ಮೈದುಂಬಿ ಹರಿಯುತ್ತಿದೆ. ಕುಡಿಗಾಣಕ್ಕೆ ೧೭೦ ಇಂಚಿನಷ್ಟು ದಾಖಲೆಯ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ ೭೦ ಇಂಚು ಮಳೆಯಾಗಿದ್ದು, ಈ ಬಾರಿ ೧೦೦ ಇಂಚು ಹೆಚ್ಚುವರಿ ಮಳೆಯಾಗಿದೆ. ಇದೇ ವ್ಯಾಪ್ತಿ ಯಲ್ಲಿರುವ ಕೊತ್ನಳ್ಳಿಗೆ ೧೫೦, ಬೆಟ್ಟದಳ್ಳಿಗೆ ೧೧೦, ಪುಷ್ಪಗಿರಿಗೆ ೧೮೫, ಹೆಗ್ಗಡಮನೆಗೆ ೧೮೦ ಇಂಚು ಮಳೆಯಾಗಿದೆ.
- ವಿಜಯ್