ಗೋಣಿಕೊಪ್ಪಲು, ಆ. ೩: ರೈತ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಅಕಾಲಿಕವಾಗಿ ಮೃತಪಟ್ಟ ರೈತ ಚೇತನಾರಾದ ರಾಮಸ್ವಾಮಿ ಹಾಗೂ ಎಂ.ರಾಮು ರವರಿಗೆ ನುಡಿನಮನ ಸಲ್ಲಿಸಲಾಯಿತು.

ರೈತ ಸಂಘ ಕೇಂದ್ರ ಕಚೇರಿ ಗೋಣಿಕೊಪ್ಪಲುವಿನಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾದ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ರಾಮಸ್ವಾಮಿ ಹಾಗೂ ರಾಮುರವರು ರೈತ ಸಂಘ ಬೆಳವಣಿಗೆಗೆ ಹಗಲು ರಾತ್ರಿ ಎನ್ನದೇ ದುಡಿದವರು. ಸಾವಿರಾರು ಸಂಖ್ಯೆಯಲ್ಲಿ ಯುವಕರಿಗೆ ಮಾದರಿಯಾಗಿದ್ದ ಇವರು,ರಸ್ತೆ ಅಪಘಾತದಲ್ಲಿ ಇತ್ತೀಚೆಗೆ ನಿಧನರಾದರು. ಇದರಿಂದಾಗಿ ರೈತ ಸಂಘಕ್ಕೆ ತುಂಬಾಲಾರದ ನಷ್ಟವಾಗಿದೆ ಎಂದರು. ಹಿರಿಯ ಚೇತನರಿಗೆ ಪುಷ್ಪ ನಮನ ಅರ್ಪಿಸಿ ಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಮುಖಂಡರಾದ ಆಲೆಮಾಡ ಮಂಜುನಾಥ್, ಚೊಟ್ಟೆಕಾಳಪಂಡ ಮನು, ಪುಚ್ಚಿಮಾಡ ರಾಯ್ ಮಾದಪ್ಪ,ಚಂಗುಲAಡ ಸೂರಜ್, ಸೇರಿದಂತೆ ತಾಲೂಕಿನ ವಿವಿಧ ಭಾಗದಿಂದ ಆಗಮಿಸಿದ್ದ ರೈತ ಮುಖಂಡರು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.