ಸಚಿವ ಸಂಪುಟ-ಇAದು ಅಥವಾ ನಾಳೆ ಘೋಷಣೆ?

ನವದೆಹಲಿ, ಆ. ೩: ಸಚಿವ ಸಂಪುಟ ರಚನೆ ಮತ್ತು ಎಷ್ಟು ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ಬಹುತೇಕ ಮಂಗಳವಾರ ಸಂಜೆ ತೀರ್ಮಾನವಾಗಿದೆ ಎಂದು ಹೇಳಲಾಗಿದ್ದು, ಎಲ್ಲವೂ ನಿಗದಿಯಂತೆ ನಡೆದರೆ ತಾ. ೪ ಅಥವಾ ೫ ರೊಳಗೆ (ಇಂದು ಅಥವಾ ನಾಳೆ) ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ತಾ. ೫ ರಂದು ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ ಎಂದು ಹೇಳಲಾಗುತ್ತಿದೆ. ಒಂದೇ ಬಾರಿಗೆ ಸಂಪುಟ ವಿಸ್ತರಣೆ ಮಾಡಿ ಮುಗಿಸಲು ಹೈಕಮಾಂಡ್ ತೀರ್ಮಾನ ಮಾಡಿದ್ದು ಮೊದಲ ಹಂತದಲ್ಲಿ ೨೫ ರಿಂದ ೩೦ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ. ಸಚಿವರ ಪಟ್ಟಿ ಅಂತಿಮಗೊAಡ ಬಳಿಕ ಸಚಿವರ ಪ್ರಮಾಣ ವಚನ ದಿನಾಂಕ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಡಿಸಿಎಂ ಸ್ಥಾನಗಳ ಬಗ್ಗೆಯೂ ತೀರ್ಮಾನ ಆಗಲಿದೆ. ಎರಡು ಮೂರು ಪಟ್ಟಿ ನೀಡಲಾಗಿದೆ. ಹೈಕಮಾಂಡ್ ಚರ್ಚೆಯ ನಂತರ ಸರ್ವ ಸಮ್ಮತ ತೀರ್ಮಾನ ಹೊರ ಹೊಮ್ಮಲಿದೆ. ಸಂಸತ್ ಕಲಾಪದ ನಂತರ ವರಿಷ್ಠರು ಸಭೆ ಸೇರಿ ಸಚಿವರು ಹಾಗೂ ಡಿಸಿಎಂಗಳ ನೇಮಕ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ವಾರ ಕಳೆದಿದ್ದರೂ ಸಂಪುಟ ವಿಸ್ತರಣೆಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ.

ಪಡಿತರ ವ್ಯವಸ್ಥೆಯಿಂದ ಬಡವರಿಗೆ ಸಂಪೂರ್ಣ ಲಾಭ ಆಗಿಲ್ಲ:ಪ್ರಧಾನಿ

ಅಹಮದಾಬಾದ್, ಆ. ೩: ಸ್ವಾತಂತ್ರö್ಯ ನಂತರ ಅಗ್ಗದ ಪಡಿತರ ಯೋಜನೆಗಳ ವ್ಯಾಪ್ತಿ ಮತ್ತು ಬಜೆಟ್ ಹೆಚ್ಚಾಗಿದೆ. ಆದರೆ ಪರಿಣಾಮಕಾರಿ ವಿತರಣಾ ವ್ಯವಸ್ಥೆ ಇಲ್ಲದೆ ಮತ್ತು ಸ್ವಾರ್ಥಿಗಳಿಂದಾಗಿ ಬಡವರಿಗೆ ಅದರ ಸಂಪೂರ್ಣ ಲಾಭ ಸಿಕ್ಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ. ಗುಜರಾತಿನ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (Pಒ-ಉಏಂಙ) ಫಲಾನುಭವಿಗಳೊಂದಿಗೆ ವರ್ಚುವಲ್ ಸಂವಾದದ ನಂತರ ಮಾತನಾಡಿದ ಪ್ರಧಾನಿ ಮೋದಿ, ವರ್ಷಗಳಿಂದ ವರ್ಷಕ್ಕೆ ಆಹಾರ ಸಂಗ್ರಹಣೆ ಹೆಚ್ಚುತ್ತಲೇ ಹೋಯಿತು, ಆದರೆ ಹಸಿವು ಮತ್ತು ಅಪೌಷ್ಟಿಕತೆಯ ಅನುಪಾತದಲ್ಲಿ ಮಾತ್ರ ಯಾವುದೇ ಕಡಿಮೆಯಾಗಲಿಲ್ಲ ಎಂದರು. ಪಿಎಂ-ಜಿಕೆಎಐ ಆಹಾರ ಭದ್ರತಾ ಯೋಜನೆಯು ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಲಕ್ಷಾಂತರ ಬಡ ಜನರಿಗೆ ಸಹಾಯ ಮಾಡುತ್ತಿದೆ ಎಂದು ಮೋದಿ ಹೇಳಿದರು. ಈ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಕುಟುಂಬಗಳಿಗೆ ಉಚಿತ ಪಡಿತರವನ್ನು ವಿತರಿಸಲಾಗುತ್ತಿದೆ ಮತ್ತು ಇದು ಸಾಂಕ್ರಾಮಿಕ ಸಮಯದಲ್ಲಿ ಬಡವರ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಬಡವರಿಗೆ ಆಹಾರ ಧಾನ್ಯ ವಿತರಣಾ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸರ್ಕಾರ ಹೊಸ ತಂತ್ರಜ್ಞಾನವನ್ನು ಬಳಸಿದೆ ಎಂದು ಮೋದಿ ಹೇಳಿದರು.

ಅಮಿತ್ ಶಾ ಅವರನ್ನು ಭೇಟಿ ಮಾಡಿದ ಶರದ್ ಪವಾರ್

ನವದೆಹಲಿ, ಆ. ೩: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಇಂದು ಭೇಟಿ ಮಾಡಿದ ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ್ ಭೇಟಿ ಮಾಡಿದ್ದು, ಹಲವು ವಿಷಯಗಳ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಸಕ್ಕರೆ ಬೆಲೆ ಮತ್ತು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಸಂಬAಧ ಸಮಾಲೋಚನೆ ನಡೆಸಿದ್ದಾರೆ. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಪ್ರಸ್ತುತದಲ್ಲಿನ ಸಕ್ಕರೆ ಮಾರಾಟದ ಬಗ್ಗೆ ಚರ್ಚೆ ನಡೆಸಲಾಗಿದೆ. ಇದು ಉತ್ಪಾದನೆಯ ಬೆಲೆಕ್ಕಿಂತ ಕಡಿಮೆಯಿದೆ. ಇದರ ಬಗ್ಗೆ ಸರ್ಕಾರ ಪರಿಶೀಲಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು. ಪೆಟ್ರೋಲಿಯಂ ಉತ್ಪನ್ನಗಳೊಂದಿಗೆ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವ ಅಗತ್ಯವಿದೆ ಎಂಬುದರ ಬಗ್ಗೆಯೂ ಮಾತನಾಡಿ ರುವುದಾಗಿ ಮಾಜಿ ಕೃಷಿ ಸಚಿವರೂ ಆಗಿರುವ ಪವಾರ್ ತಿಳಿಸಿದರು. ಸಕ್ಕರೆ ಕ್ಷೇತ್ರಕ್ಕೆ ಸಂಬAಧಿಸಿದ ಎಲ್ಲಾ ಸಮಸ್ಯೆಗಳ ಬಗ್ಗೆ ಪರಿಶೀಲಿಸುವುದಾಗಿ ಅಮಿತ್ ಶಾ ಭರವಸೆ ನೀಡಿರುವುದಾಗಿ ಎನ್.ಸಿ.ಪಿ. ಮುಖ್ಯಸ್ಥ ಹೇಳಿದರು.

ಮೊಬೈಲ್ ಚಾರ್ಜ್ ಹಾಕುವ ವಿಚಾರಕ್ಕೆ ಗಲಾಟೆ-ಕೊಲೆಯಲ್ಲಿ ಅಂತ್ಯ

ಬೆAಗಳೂರು, ಆ. ೩: ಮೊಬೈಲ್ ಚಾರ್ಜ್ ಹಾಕುವ ವಿಚಾರಕ್ಕೆ ಆರಂಭವಾಗಿದ್ದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ರಾಜಾಜಿನಗರದಲ್ಲಿ ನಡೆದಿದೆ. ಕೊಲೆಯಾದ ಯುವಕ ಸುನೀಲ್ ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶ ಮೂಲದ ಯುವಕರಿಬ್ಬರೂ ನಗರದ ಗ್ರಾನೈಟ್ ಕೆಲಸ ಮಾಡುತ್ತಿದ್ದು, ರಾಜಾಜಿನಗರದಲ್ಲಿ ವಾಸವಾಗಿದ್ದರು. ಒಂದೇ ರೂಮಿನಲ್ಲಿದ್ದ ಯುವಕರು ಸೋಮವಾರ ರಾತ್ರಿ ಮದ್ಯ ಸೇವಿಸಿದ್ದರು. ಒಂದೇ ಸ್ವಿಚ್ ಇದ್ದು, ಈ ವೇಳೆ ಚಾರ್ಜ್ ಹಾಕುವ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ಆರಂಭವಾಗಿದೆ. ಜಗಳ ತಾರಕ್ಕಕ್ಕೇರಿದ್ದು, ಇಬ್ಬರ ನಡುವೆ ತಳ್ಳಾಟ ನಡೆದ ಪರಿಣಾಮ ಪಕ್ಕದಲ್ಲಿದ್ದ ಸೌದೆಯಿಂದ ಆರೋಪಿ ಮೃತನ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ತಲೆಗೆ ಬಿದ್ದ ಏಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಸುನೀಲ್‌ನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಈ ಸಂಬAಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಚಾರಣೆ ಮುಂದುವರಿದಿದೆ.

‘ಮೋಸ್ಟ್ ವಾಂಟೆಡ್’ ಉಗ್ರರ ಪಟ್ಟಿ ಬಿಡುಗಡೆ

ಶ್ರೀನಗರ, ಆ. ೩: ಕಣಿವೆ ರಾಜ್ಯದಲ್ಲಿ ಆತಂಕ ಸೃಷ್ಟಿಸಲು ಸಂಚು ರೂಪಿಸಿರುವ ೧೦ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಕಾಶ್ಮೀರ ಪೊಲೀಸ್ ಐಜಿ ವಿಜಯ್ ಕುಮಾರ್ ಅವರು, ೧೦ ಭಯೋತ್ಪಾದಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಪಟ್ಟಿಯಲ್ಲಿ ಕೆಲವು ಹಳೆಯ ಮತ್ತು ಕೆಲ ಹೊಸ ಉಗ್ರರ ಹೆಸರುಗಳನ್ನು ಸೇರ್ಪಡೆಗೊಳಿಸಲಾಗಿದೆ. ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆಯನ್ನು ಹರಡಲು ಪ್ರಯತ್ನಿಸುತ್ತಿರುವ ಈ ಭಯೋತ್ಪಾದಕರು ವಿವಿಧ ಸಂಘಟನೆಗಳೊAದಿಗೆ ಸಂಬAಧ ಹೊಂದಿದ್ದಾರೆ ಎಂದು ಹೇಳಲಾಗಿದೆ. ಪಟ್ಟಿಯಲ್ಲಿ ಹಳೆಯ ಸಲೀಂ ಪರ್ರೆ, ಯೂಸುಫ್ ಕಾಂಟ್ರೋ, ಅಬ್ಬಾಸ್ ಶೇಖ್, ರಿಯಾಜ್ ಶೆಟರ್ಗುಂಡ್, ಫಾರೂಕ್ ನಲಿ, ಜುಬೇರ್ ವಾನಿ ಮತ್ತು ಅಶ್ರಫ್ ಮೊಲ್ವಿ ಹಳೆಯ ಭಯೋತ್ಪಾದಕರಿದ್ದು, ಸಾಕಿಬ್ ಮಂಜೂರ್, ಉಮರ್ ಮುಸ್ತಾಕ್ ಖಾಂಡೆ ಮತ್ತು ವಕೀಲ ಶಾ ಹೆಸರುಗಳು ಹೊಸ ಭಯೋತ್ಪಾದಕರೆಂದು ಹೇಳಲಾಗಿದೆ.

ಸೇನಾ ಹೆಲಿಕಾಪ್ಟರ್ ಪತನ

ಚಂಡೀಗಢ, ಆ. ೩: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ರಂಜಿತ್ ಸಾಗರ್ ಡ್ಯಾಂ ಬಳಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಸೇನಾ ಮೂಲಗಳಿಂದ ತಿಳಿದುಬಂದಿದೆ. ಪಠಾಣ್ ಕೋಟ್‌ನಿಂದ ವೆಪನ್ ಸಿಸ್ಟಮ್ ಇಂಟಿಗ್ರೇಟೆಡ್ ಹೆಲಿಕಾಪ್ಟರ್ ಬೆಳಿಗ್ಗೆ ೧೦.೨೦ಕ್ಕೆ ಟೇಕಾಫ್ ಆಗಿದೆ. ರಂಜಿತ್ ಸಾಗರ್ ಡ್ಯಾಂ ಪ್ರದೇಶದಲ್ಲಿ ಹೆಲಿಕಾಪ್ಟರ್ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಘಟನೆಯಲ್ಲಿ ಸಾವು-ನೋವು ಸಂಭವಿಸಿರುವ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಹೆಲಿಕಾಪ್ಟರ್ ಪತನಗೊಂಡಿರುವ ಡ್ಯಾಂ ಪಂಜಾಬ್‌ನ ಪಠಾಣ್‌ಕೋಟ್‌ನಿಂದ ಸುಮಾರು ೩೦ ಕಿ.ಮೀ. ದೂರದಲ್ಲಿದೆ ಎಂದು ತಿಳಿದುಬಂದಿದೆ. ಈ ವರ್ಷದ ಆರಂಭದಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಜಮ್ಮು -ಕಾಶ್ಮೀರ, ಪಂಜಾಬ್ ಗಡಿಯಲ್ಲಿ ಪತನಗೊಂಡು ಓರ್ವ ಪೈಲಟ್ ಮೃತಪಟ್ಟಿದ್ದರು.

ಜೆ.ಎನ್.ಯು. ಹಿಂಸಾಚಾರ:ಯಾರನ್ನೂ ಬಂಧಿಸಿಲ್ಲ

ನವದೆಹಲಿ, ಆ. ೩: ೨೦೨೦ರಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆ.ಎನ್.ಯು.) ನಡೆದ ಹಿಂಸಾಚಾರಕ್ಕೆ ಸಂಬAಧಿಸಿದAತೆ ಹಲವರನ್ನು ವಿಚಾರಣೆ ನಡೆಸಿದರೂ ದೆಹಲಿ ಪೊಲೀಸರು ಯಾರನ್ನೂ ಬಂಧಿಸಿಲ್ಲ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ಜೆ.ಎನ್.ಯು. ಕ್ಯಾಂಪಸ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬAಧಿಸಿದAತೆ ವಸಂತ್ ಕುಂಜ್ (ಉತ್ತರ) ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೂರು ಪ್ರಕರಣಗಳ ತನಿಖೆಗಾಗಿ ಕ್ರೆöÊಂ ಬ್ರಾಂಚ್ ವಿಶೇಷ ತನಿಖಾ ತಂಡವನ್ನು (ಎಸ್.ಐ.ಟಿ.) ರಚಿಸಿದೆ ಎಂದು ದೆಹಲಿ ಪೊಲೀಸರು ವರದಿ ನೀಡಿರುವುದಾಗಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.