ಪೆರಾಜೆ, ಆ. ೩: ಕುಂಬಳ ಚೇರಿಯ ವೈನಾಟ್ ಕುಲವನ್ ಸಭಾಂಗಣದಲ್ಲಿ ಗುರುಪೂಜೆ ಉತ್ಸವ ಜರುಗಿತು. ರಾಷ್ಟಿçÃಯ ಸ್ವಯಂ ಸೇವಕ ಸಂಘ ಪುತ್ತೂರು ಜಿಲ್ಲಾ ಪ್ರಚಾರಕ್ ರೋಹಿತ್, ಬೌದ್ಧಿಕ್ ನೀಡಿ ಮಾತನಾಡಿ, ‘ಕತ್ತಲಿನಿಂದ ಬೆಳಕಿನ ಕಡೆಗೆ' ಎಂಬ ಅರ್ಥವನ್ನು ಸಾರುತ್ತದೆ.
ಹಿಂದು ಸಂಪ್ರದಾಯದಲ್ಲಿ ಗುರು ಪೂಜೆ ಮಾಡದೇ ಯಾವ ಕಾರ್ಯವನ್ನು ಆರಂಭಿಸಬಾರದು. ಪ್ರಾಚೀನ ಭಾರತದ ಶಿಕ್ಷಣ ಪದ್ಧತಿ ಯಲ್ಲಿ ಶಿಷ್ಯರನ್ನು ಗುರು ತನ್ನಾಶ್ರಮಕ್ಕೆ ಬರಮಾಡಿಕೊಂಡು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಗಳೆರಡನ್ನು ನೀಡುತ್ತಿದ್ದರು. ಶಿಷ್ಯರು ಸಹ ಗುರುವಿನ ಬಗ್ಗೆ ಅನನ್ಯ ಭಕ್ತಿಯಿಂದ ವಿದ್ಯಾರ್ಜನೆ ಮಾಡುತ್ತಿದ್ದರು.
ಧಾರ್ಮಿಕ ಗ್ರಂಥಗಳಾದ ಮಹಾಭಾರತ, ರಾಮಾಯಣ ಕೂಡ ನಮ್ಮ ಪೂರ್ವಜರ ಜೀವನಕ್ರಮ, ಸಂಸ್ಕೃತಿ, ಅವರು ನಂಬಿದ್ದ, ಗೌರವಿ ಸುತ್ತಿದ್ದ ಮೌಲ್ಯಗಳನ್ನು ತಿಳಿಸುತ್ತವೆ. ಯಾವುದೇ ಒಂದು ಯಶಸ್ವಿ ವ್ಯಕ್ತಿಯ ಹಿಂದೆ ಆತನ ಗುರು ಪ್ರಮುಖ ಪಾತ್ರವಹಿಸುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ವಿ.ಜಿ. ಕಾನೂನು ಮಹಾ ವಿದ್ಯಾಲದ ಪ್ರಾಧ್ಯಾಪಕ ಲಕ್ಷ್ಮೀಕಾಂತ್ ಕುಂದಲ್ಪಾಡಿ, ಗುರು ಎಂದರೆ ಕೇವಲ ಶಾಲೆಗಳಲ್ಲಿ ಅಕ್ಷರ ಹೇಳಿಕೊಡುವ ಮತ್ತು ಶಿಕ್ಷಣ ವೃತ್ತಿಯಲ್ಲಿ ತೊಡಗಿಸಿಕೊಂಡವರಷ್ಟೆ ಗುರುಗಳಲ್ಲ.
ಬದಲಾಗಿ ಮನೆಯಲ್ಲಿ ತಾಯಿ ತಂದೆ ಅಜ್ಜ ಅಜ್ಜಿಯರು, ಬಂಧು ಬಳಗದವರು ಸ್ನೇಹಿತರು, ದಿನ ನೀವು ನಾವು ನೋಡುವ ಮಾತಾಡಿಸುವ ಜನರಿಂದ ಅನೇಕ ಒಳ್ಳೆಯ ಜೀವನ, ಮೌಲ್ಯಾಧಾರಿತ ವಿಚಾರ ಗಳನ್ನು ತಿಳಿದುಕೊಂಡಾಗ ಅವರೇ ನಮಗೆ ಗುರುಗಳಾಗುತ್ತಾರೆ.
ಈ ಸಂದರ್ಭ ಸುಳ್ಯ ತಾಲೂಕು ಕಿಶೋರ್ ಪ್ರಮುಖ್ ಶ್ರೀನಾಥ್ ಪಡುಮಜಲು, ಅರಂತೋಡು ಮಂಡಲ ಕಾರ್ಯವಹ ಸಚಿನ್ ಪೆರಾಜೆ, ಅರಂತೋಡು ಮಂಡಲ ಪ್ರಮುಖ್ ಭುವನ್ ಕುಂಬಳಚೇರಿ, ಮುಖ್ಯ ಶಿಕ್ಷಕ್ ಭವಿತ್ ಕುಂಬಳಚೇರಿ, ಶಿಕ್ಷಕ್ ದೀಕ್ಷಿತ್ ಹೊದ್ದೆಟ್ಟಿ ಗ್ರಾಮ ಪಂಚಾಯತ್ ಸದಸ್ಯರಾದ, ಉದಯ ಚಂದ್ರ ಕುಂಬಳಚೇರಿ, ಸುಭಾಷ್ ಚಂದ್ರ ಬಂಗಾರಕೋಡಿ ಸೇರಿದಂತೆ ಶಾಖೆಯ ಸ್ವಯಂ ಸೇವಕರು ಗುರುಪೂಜಾ ಅರ್ಪಣಾ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.