ಕೂಡಿಗೆ, ಆ. ೩: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಪಕ್ಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆಯ ಕೆಲ ಭಾಗಗಳು ಹಾಳಾಗಿರುವ ಹಿನ್ನೆಲೆ ಅದರ ದುರಸ್ತಿ ಕಾರ್ಯವನ್ನು ಕೈಗೊಳ್ಳುವಂತೆ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಳೆದ ಎರಡೂ ವರ್ಷಗಳಿಂದಲೂ ಸತತವಾಗಿ ಕಾವೇರಿ ನದಿಯು ತುಂಬಿ ಹರಿದ ಪರಿಣಾಮವಾಗಿ ಮತ್ತು ಕಾವೇರಿ ಹಾರಂಗಿ ನದಿಗಳ ನೀರಿನ ಮಟ್ಟ ಏಕಾಏಕಿ ಏರಿದ ಹಿನ್ನೆಲೆ ಬೃಹತ್ ಗಾತ್ರದ ಮರದ ದಿಮ್ಮಿಗಳು ತೂಗು ಸೇತುವೆಗೆ ಬಡಿದ ಪರಿಣಾಮ ತೂಗು ಸೇತುವೆಯ ಕೆಲ ಕಾಂಕ್ರಿಟ್ ಶೀಟ್ಗಳು ಕೊಚ್ಚಿಹೋಗಿದ್ದವು. ಅಲ್ಲದೆ ಕಬ್ಬಿಣದ ರಾಡ್ಗಳು ಬಿಟ್ಟುಹೋಗಿವೆ. ಇದರಿಂದಾಗಿ ಸಾರ್ವಜನಿಕರು ಈ ತೂಗು ಸೇತುವೆಯ ಮೇಲೆ ಸಂಚರಿಸುವಾಗ ಭಯ ಪಡುತ್ತಿದ್ದಾರೆ. ಸಂಬAಧಿಸಿದ ಅಧಿಕಾರಿಗಳು ತೂಗು ಸೇತುವೆಯನ್ನು ಪರಿಶೀಲನೆ ನಡೆಸಿ ಅತೀ ಶೀಘ್ರವಾಗಿ ದುರಸ್ತಿಪಡಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.