ಮಡಿಕೇರಿ, ಆ. ೩: ಮಾದಾಪುರದಲ್ಲಿ ಕೊಡಗು ರಕ್ಷಣಾ ವೇದಿಕೆಯ ನೂತನ ಘಟಕವನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಜಾನ್ಸನ್ ಡಿಸೋಜ ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.

ಉಪಾಧ್ಯಕ್ಷರಾಗಿ ಸಜೇಶ್ ಪೂಜಾರಿ, ಕಾರ್ಯದರ್ಶಿಯಾಗಿ ಹರೀಶ್ ಕುಮಾರ್, ಖಜಾಂಚಿಯಾಗಿ ಎಸ್. ಮಣಿಕಂಠ, ನಿರ್ದೇಶಕರುಗಳಾಗಿ ಕೆ.ಆರ್. ಸಚಿನ್, ರೋಹಿತ್ ಪೂಜಾರಿ, ಕಿರಣ್ ಕುಮಾರ್, ವಿನು, ಸದೀಶ್ ಹಾಗೂ ಪುನೀತ್ ನೇಮಕಗೊಂಡಿದ್ದಾರೆ.