ಕೂಡಿಗೆ, ಆ. ೩: ಕೂಡಿಗೆ ರೇಷ್ಮೆ ಕೃಷಿ ಕ್ಷೇತ್ರದ ಸರ್ಕಾರಿ ರೇಷ್ಮೆ ಬಿತ್ತನೆ ಗೂಡು ಉತ್ಪಾದನಾ ಕೇಂದ್ರದಲ್ಲಿ ರೇಷ್ಮೆ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಎಂ.ಎಸ್. ಮಹೇಶ್ ರೇಷ್ಮೆ ಕೃಷಿ ವಿಸ್ತರಣಾಧಿಕಾರಿಯಾಗಿ ಬಡ್ತಿ ಹೊಂದಿದ್ದಾರೆ.

ಸರಕಾರವು ಇತ್ತೀಚೆಗೆ ಎಂ.ಎಸ್. ಮಹೇಶ್ ನವರಿಗೆ ಮುಂಬಡ್ತಿ ನೀಡಿ ಅವರನ್ನು ಅರಕಲಗೂಡು ತಾಲೂಕಿಗೆ ವರ್ಗಾವಣೆ ಮಾಡಿದೆ. ಮಹೇಶ್ ರೇಷ್ಮೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಜೊತೆಗೆ ಮಡಿಕೇರಿಯ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆಯ ಕಚೇರಿಯಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇದೀಗ ಅರಕಲಗೂಡಿಗೆ ವರ್ಗಾವಣೆಗೊಂಡಿದ್ದಾರೆ.