ಮಡಿಕೇರಿ, ಆ. ೨: ಹುಣಸೂರಿನಲ್ಲಿ ವೃದ್ಧ ದಂಪತಿಯ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ, ಚಾಕುವಿನಿಂದ ಹಲ್ಲೆ ಮಾಡಿ ನಗದು, ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಕೊಡಗು ಜಿಲ್ಲೆಯ ಮೂವರು ಆರೋಪಿಗಳು ಸೇರಿದಂತೆ ದರೋಡೆಕೋರರ ಗುಂಪಿನ ಆರು ಮಂದಿಯನ್ನು ಹುಣಸೂರು ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರದ ಮಹಮ್ಮದ್ ಅಫ್ರಿನ್, ಮೇಕೇರಿ ಗ್ರಾಮದ ಎಂ.ಹೆಚ್. ಆಶಿಕ್ ಹುಸೇನ್, ಮಡಿಕೇರಿಯ ಎಂ.ಎ. ಅಜರುದ್ದೀನ್ ಸೇರಿದಂತೆ ಪಿರಿಯಾಪಟ್ಟಣ ಕುಂಬಾರ ಬೀದಿಯ ಮೋಸಿನ್ ಬೇಗ್, ಹುಣಸೂರಿನ ಇಮ್ರಾನ್,
(ಮೊದಲ ಪುಟದಿಂದ) ಮಿರ್ಜಾ ತನ್ವೀರ್ ಬೇಗ್ ಅವರುಗಳನ್ನು ಬಂಧಿಸಲಾಗಿದೆ.
ಈ ಸಂಬAಧ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜು. ೨೬ ರಂದು ರಾತ್ರಿ ೭ ಗಂಟೆ ಹುಣಸೂರು ಪಟ್ಟಣದ ಗಜಾಲಾ ತರಾನಾಮ್ ಕುಟುಂಬ ಮನೆಯಲ್ಲಿದ್ದಾಗ ಕಾಲಿಂಗ್ ಬೆಲ್ ಆಗಿದ್ದು, ಬಾಗಿಲು ತೆಗೆದಾಗ ೫ ಜನ ದುಷ್ಕರ್ಮಿಗಳು ಬಲವಂತವಾಗಿ ಒಳನುಗ್ಗಿ ಗಜಾಲಾ ಅವರ ತಂದೆ, ತಾಯಿಯ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ, ಚಾಕುವಿನಿಂದ ಹಲ್ಲೆ ಮಾಡಿ ನಗದು ೬ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಡಿ.ಬಿ.ಬಿ.ಎಲ್ ಬಂದೂಕನ್ನು ದೋಚಿ ಪರಾರಿಯಾಗಿ ದ್ದರು.
ಈ ಸಂಬAಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಹುಣಸೂರು ಠಾಣೆಯ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರವೀಣ್ ಪೂಜಾರಿ ಕೊಲೆ ಪ್ರಕರಣದ ಆರೋಪಿ
ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಅಫ್ರಿನ್ ೨೦೧೬ ಆಗಸ್ಟ್ ೧೪ ರಂದು ಕುಶಾಲನಗರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮ ಹಾಗೂ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮನೆಗೆ ತೆರಳುತ್ತಿದ್ದ ಹಿಂದೂ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆಗೈದ ಪ್ರಕರಣದಲ್ಲಿ ಭಾಗಿಯಾಗಿದ್ದ ೯ ಆರೋಪಿಗಳ ಪೈಕಿ ಒಬ್ಬನಾಗಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣದಲ್ಲಿ ಅಫ್ರಿನ್ ತಲೆ ಮರೆಸಿಕೊಂಡಿದ್ದ. ಅದಾದ ಬಳಿಕ ಈತನನ್ನು ಬಂಧಿಸಲಾಗಿತ್ತು. ಮತ್ತೋರ್ವ ಆರೋಪಿ ಮಿರ್ಜಾ ಬೇಗ್ ಹುಣಸೂರಿನ ವಿದ್ಯಾರ್ಥಿಗಳ ಜೋಡಿ ಕೊಲೆ ಪ್ರಕರಣ ಆರೋಪಿ ಯಾಗಿದ್ದು, ದರೋಡೆ ಗುಂಪಿನ ಬಂಧಿತರೆಲ್ಲರೂ ೩೫ ವರ್ಷ ಒಳಪಟ್ಟವರಾಗಿದ್ದು, ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.