ಟೋಕಿಯೋ, ಆ. ೨: ಭಾರತ ಮಹಿಳೆಯರ ಹಾಕಿ ತಂಡ, ೩ ಬಾರಿ ಒಲಂಪಿಕ್ ಚಿನ್ನದ ಪದಕ ವಿಜೇತ ಆಸ್ಟೆçÃಲಿಯಾದ ವಿರುದ್ಧ ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ೧-೦ ಗೋಲ್‌ಗಳಿಂದ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ಈ ಮೂಲಕ ಒಲಂಪಿಕ್ ಹಾಕಿಯಲ್ಲಿ ಮೊದಲನೆಯ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದಂತಾಗಿದೆ. ತಂಡದ ಸಹಾಯಕ ಕೋಚ್ ಆಗಿ ಜಿಲ್ಲೆಯ ಸುಂಟಿಕೊಪ್ಪದವರಾದ ಅಂಕಿತಾ ಸುರೇಶ್ ಅವರು ಕಾರ್ಯ ನಿರ್ವಹಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಭಾರತಕ್ಕೆ ಲಭ್ಯವಾದ ಏಕೈಕ ಪೆನಾಲ್ಟಿ ಕಾರ್ನರ್ ಮೂಲಕ ಗುರ್‌ಜಿತ್ ಕೋರ್ ಅವರು ಗೋಲ್ ಭಾರಿಸಿದ್ದು, ಆಸ್ಟೆçÃಲಿಯಾ ತನಗೆ ದೊರೆತ ೭ ಪೆನಾಲ್ಟಿ ಕಾರ್ನರ್‌ಗಳಲ್ಲಿ ಒಂದನ್ನೂ

(ಮೊದಲ ಪುಟದಿಂದ) ಗೋಲ್ ಆಗಿ ಪರಿವರ್ತಿಸದೆ ಸೋಲು ಅನುಭವಿಸಿತು. ಪಂದ್ಯದಲ್ಲಿ ಕೊನೆಯ ೩ ನಿಮಿಷ ಬಾಕಿ ಇರುವಾಗಲೂ ಆಸ್ಟೆçÃಲಿಯಾಗೆ ಪೆನಾಲ್ಟಿ ಕಾರ್ನರ್ ದೊರೆತಿದ್ದು, ಭಾರತದ ಅತ್ಯುತ್ತಮ ರಕ್ಷಣಾತ್ಮಕ ಆಟದಿಂದಾಗಿ ಆಸ್ಟೆçÃಲಿಯಾಗೆ ಗೋಲಿನ ಭಾಗ್ಯ ದೊರೆಯಲಿಲ್ಲ. ತಾ. ೪ ರಂದು (ನಾಳೆ) ಅರ್ಜಂಟೀನಾ ವಿರುದ್ಧ ಸಮಿಫೈನಲ್‌ನಲ್ಲಿ ಭಾರತ ಸ್ಪರ್ಧಿಸಲಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ನೆದರ್‌ಲ್ಯಾಂಡ್ ಹಾಗೂ ಬ್ರಿಟನ್ ಭಾಗವಹಿಸಲಿವೆ.

ಇಂದು ಪುರುಷರ ಹಾಕಿ ಸೆಮಿಫೈನಲ್

ಭಾರತ ಪುರುಷರ ಹಾಕಿ ತಂಡದ ಸೆಮಿಫೈನಲ್ ಪಂದ್ಯ ತಾ. ೩ ರಂದು (ಇಂದು) ಬೆಳಿಗ್ಗೆ ೭ ಗಂಟೆಗೆ ನಡೆಯಲಿದೆ. ಬೆಲ್ಜಿಯಮ್ ವಿರುದ್ಧ ಭಾರತ ಸ್ಪರ್ಧಿಸಲಿದೆ.