ನೈಜಿರಿಯನ್ ಪ್ರಜೆ ಸಾವು: ಪೊಲೀಸರ ಮೇಲೆ ಹಲ್ಲೆಗೆ ಯತ್ನ
ಬೆಂಗಳೂರು, ಆ. ೨: ಡ್ರಗ್ಸ್ ಪ್ರಕರಣ ಸಂಬAಧ ಬಂಧಿಸಲಾಗಿದ್ದ ನೈಜಿರಿಯನ್ ಪ್ರಜೆ ಠಾಣೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಜೆಸಿ ನಗರ ಪೊಲೀಸ್ ಠಾಣೆಯ ಮುಂದೆ ನೈಜಿರಿಯನ್ ಪ್ರಜೆಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ನೈಜಿರಿಯನ್ ಪ್ರಜೆಗಳ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದು ಹಲವರನ್ನು ಬಂಧಿಸಿದ್ದಾರೆ. ಡ್ರಗ್ಸ್ ಬಗ್ಗೆ ಮಾಹಿತಿ ಸಿಕ್ಕ ಹಿನೆÀ್ನಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ನೈಜಿರಿಯನ್ ಪ್ರಜೆ ಗಲಾಟೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದನು. ಆದರೆ ಪೊಲೀಸರು ಆತನನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು. ಪೊಲೀಸರ ವಶದಲ್ಲಿದ್ದ ಆತ ಸಾವನ್ನಪ್ಪಿದ್ದಾನೆ. ವೈದ್ಯರು ಹೃದಯಾಘಾತದಿಂದಾಗಿ ಆತ ಮೃತಪಟ್ಟಿರುವುದಾಗಿ ವರದಿ ನೀಡಿದ್ದಾರೆ. ಆದರೆ ನೈಜಿರಿಯನ್ ಪ್ರಜೆಗಳು ಪೊಲೀಸರೇ ಹೊಡೆದು ಸಾಯಿಸಿದ್ದಾರೆ ಎಂದು ಆರೋಪಿಸಿ ಇಂದು ಜೆಸಿ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ಬುಧವಾರ ಸಂಪುಟ ವಿಸ್ತರಣೆ ಸಾಧ್ಯತೆ
ನವದೆಹಲಿ, ಆ. ೨: ರಾಜ್ಯದಲ್ಲಿ ನೂತನ ಸಂಪುಟ ರಚನೆಯ ಸರ್ಕಸ್ ಇಂದು ಅಥವಾ ನಾಳೆಯೊಳಗೆ ಪೂರ್ಣವಾಗಲಿದ್ದು, ಮೊದಲ ಹಂತದಲ್ಲಿ ೧೫ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ದೆಹಲಿ ಮೂಲಗಳು ಹೇಳಿವೆ. ದೆಹಲಿಯಲ್ಲಿ ಸುದ್ದಿಗಾರರ ಜೊತೆ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಂಭಾವ್ಯ ಸಚಿವರ ಪಟ್ಟಿ ಇಂದು ಅಥವಾ ನಾಳೆಯೊಳಗೆ ಸಿದ್ದವಾಗಲಿದೆ. ನೂತನ ಸಚಿವರ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಿದರೆ ಬುಧವಾರ ಸಂಪುಟ ಈಗಿರುವಂತಹ ರಾಜಕೀಯ ಸನ್ನಿವೇಶದಲ್ಲಿ ಎಲ್ಲರನ್ನು ಸೇರಿಸಿಕೊಂಡು ಹೋಗುವಂತಹ ಒಮ್ಮತದ ನಿರ್ಧಾರ ಕೈಗೊಳ್ಳಬೇಕಿದೆ. ಆದರೆ ಎಲ್ಲಾ ಶಾಸಕರಿಗೂ ಮಂತ್ರಿ ಪದವಿ ಕೊಡಲು ಆಗುವುದಿಲ್ಲ. ಪ್ರಾದೇಶಿಕವಾಗಿಯೂ ಆಯ್ಕೆ ಮಾಡಬೇಕಿದೆ ಎಂದರು. ವರಿಷ್ಠರನ್ನು ಭೇಟಿ ಮಾಡುತ್ತಿದ್ದೇನೆ. ಬಿಜೆಪಿ ಹೈಕಮಾಂಡ್ ನಿರ್ಧಾರದಂತೆ ಸಂಪುಟ ರಚನೆ ಆಗಲಿದೆ. ಸಮುದಾಯದ ದೃಷ್ಟಿಯಿಂದ, ಹಳಬರನ್ನು ಎಷ್ಟು ಜನರನ್ನು ಮುಂದುವರೆಸಬೇಕು. ಎಷ್ಟು ಜನರಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಎಷ್ಟು ಹಂತದಲ್ಲಿ ಸಚಿವ ಸಂಪುಟ ರಚನೆ ಮಾಡಬೇಕು. ಎಷ್ಟು ಜನರಿಗೆ ಡಿಸಿಎಂ ಸ್ಥಾನ ಕೊಡಬೇಕು ಎನ್ನುವ ಕುರಿತಂತೆ ಚರ್ಚೆಯಾಗಲಿದ್ದು ನಂತರವಷ್ಟೆ ಅಂತಿಮವಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರದ್ದಾದ ಐಟಿ ಕಾಯ್ದೆಯ ಸೆಕ್ಷನ್ ೬೬ಎ ಅಡಿ ಕೇಸ್ ದಾಖಲು
ನವದೆಹಲಿ, ಆ. ೨: ರದ್ದಾದ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ ೬೬ಎ ಅಡಿಯಲ್ಲಿ ಪ್ರಕರಣ ದಾಖಲಿಸುತ್ತಿರುವುದಕ್ಕೆ ಸಂಬAಧಿಸಿದAತೆ ಸುಪ್ರೀಂ ಕೋರ್ಟ್ ಸೋಮವಾರ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಗಳಿಗೆ ನೋಟಿಸ್ ನೀಡಿದೆ. ೨೦೧೫ರಲ್ಲಿ ಸುಪ್ರೀಂ ಕೋರ್ಟ್ ರದ್ದಗೊಳಿಸಿದ್ದ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ ೬೬ಎ ಅಡಿಯಲ್ಲಿ ಈಗಲೂ ಜನರ ವಿರುದ್ಧ ಪ್ರಕರಣದಾಖಲಿಸಲಾಗುತ್ತಿದೆ ಎಂದು ಎನ್ ಜಿಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಎಲ್ಲಾ ಹೈಕೋರ್ಟ್ಗಳ ರಿಜಿಸ್ಟ್ರಾರ್ ಜನರಲ್ಗೆ ನೋಟೀಸ್ ನೀಡಿದೆ. ಪೊಲೀಸ್ ರಾಜ್ಯ ವಿಷಯವಾಗಿರುವುದರಿಂದ, ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿವಾದಿಯಾಗಿ ಮಾಡುವುದು ಉತ್ತಮ ಮತ್ತು ಈ ಸಂಬAಧ ನಾವು ಒಂದು ಸಮಗ್ರ ಆದೇಶವನ್ನು ಜಾರಿಗೊಳಿಸಬಹುದು. ಇದರಿಂದ ಪ್ರಕರಣ ಒಂದೇ ಬಾರಿಗೆ ಇತ್ಯರ್ಥವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್ ಮತ್ತು ಬಿಆರ್ ಗವಾಯಿ ಅವರ ನ್ಯಾಯಪೀಠ ಹೇಳಿದೆ.
ಡಿಜಿಟಲ್ ಪಾವತಿ ವ್ಯವಸ್ಥೆ 'ಇ-ರೂಪಿ'ಗೆ ಪ್ರಧಾನಿ ಮೋದಿ ಚಾಲನೆ
ನವದೆಹಲಿ, ಆ. ೨: ದೇಶದಲ್ಲಿ ನಗದು ರಹಿತ ವಹಿವಾಟು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇವುಗಳನ್ನು ಮತ್ತಷ್ಟು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಮತ್ತೊಂದು ಹೊಸ ಕಾರ್ಯಕ್ರಮ ಆರಂಭಿಸಿದೆ. ಈ ಹಿನೆÀ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆ ಇ- ರುಪಿ(ಇ-ಖUPI))ಗೆ ಚಾಲನೆ ನೀಡಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಮೋದಿ, ಭಾರತದಲ್ಲಿ ಡಿಜಿಟಲ್ ಪಾವತಿಗಳ ಪ್ರಕ್ರಿಯೆಯನ್ನು ವಿಸ್ತರಿಸುವುದರ ಜೊತೆಗೆ ಮಧ್ಯವರ್ತಿ ಸಾಧನಗಳ ಅವಶ್ಯಕತೆಯನ್ನು ತಗ್ಗಿಸುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ. ಈ ವ್ಯವಸ್ಥೆ ನ್ಯಾಷನಲ್ ಪೇಮೆಂಟ್ಸ್ ಆಫ್ ಇಂಡಿಯಾ, ಆರ್ಥಿಕ ಸಚಿವಾಲಯ, ಆರೋಗ್ಯ ಸಚಿವಾಲಯ, ನ್ಯಾಷನಲ್ ಹೆಲ್ತ್ ಅಥಾರಿಟಿ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಲಾಗಿದೆ ಎಂದರು. ಇ- ರುಪಿ ಎಂದರೇನು..? ಡಿಜಿಟಲ್ ಪಾವತಿಗಳನ್ನು ಸುಲಭಗೊಳಿಸಲು ಇ- ರುಪಿಯನ್ನು ತರಲಾಗಿದೆ. ಸುರಕ್ಷತೆ, ಭದ್ರತೆ ಆಧಾರದ ಮೇಲೆ ಇ -ರುಪಿ ಬಳಕೆಗೆ ಲಭ್ಯವಾಗಲಿದೆ. ಇ-ರುಪಿ ವಿಧಾನದಲ್ಲಿ ಗ್ರಾಹಕರ ವಿವರಗಳು ಗೋಪ್ಯವಾಗಿರುತ್ತವೆ. ಕ್ಯೂ ಆರ್ ಕೋಡ್, ಎಸ್ ಎಂ ಎಸ್ ಸ್ಟ್ರಿಂಗ್ ಓಚರ್ ಗಳನ್ನು ಗ್ರಾಹಕರಿಗೆ ಕಳುಹಿಸುವ ಮೂಲಕ ಪಾವತಿಗಳು ನಡೆಯುತ್ತವೆ. ಬ್ಯಾಂಕ್ ಖಾತೆಗಳು, ಕಾರ್ಡುಗಳು, ಆಪ್ಗಳೊಂದಿಗೆ ಸಂಬAಧವಿಲ್ಲದೆ ಗ್ರಾಹಕರು ವಹಿವಾಟು ನಡೆಸಬಹುದು. ಇದರ ಮತ್ತೊಂದು ಉದ್ದೇಶ ಏನೆಂದರೆ ಕಾರ್ಡ್, ಪೇಮೆಂಟ್ ಆಪ್, ಇಂಟರ್ನೆಟ್ ಬ್ಯಾಂಕಿAಗ್ ಇಲ್ಲದೆ ಪಾವತಿಗಳನ್ನು ಮಾಡಬಹುದು. ಪ್ರಸ್ತುತ ೮ ಬ್ಯಾಂಕುಗಳ ಮೂಲಕ ಇ-ರುಪಿ ಸೇವೆಗಳು ಲಭ್ಯವಾಗಲಿವೆ.
ಮಂಗಗಳ ಹತ್ಯೆ: ದಂಪತಿ ಸೇರಿ ಐವರ ಬಂಧನ
ಹಾಸನ, ಆ.೨: ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ವರದಿಯಾಗಿದ್ದ ಮಂಗಗಳ ಹತ್ಯೆ ಪ್ರಕರಣದಲ್ಲಿ ಅರಣ್ಯ ಇಲಾಖೆ-ಪೊಲೀಸ್ ಇಲಾಖೆಯವರು ಜಂಟಿ ಕಾರ್ಯಾಚರಣೆ ನಡೆಸಿದ್ದು, ದಂಪತಿ ಸೇರಿ ಐವರನ್ನು ಬಂಧಿಸಲಾಗಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಡಿ.ಸಿ ಆರ್. ಗಿರೀಶ್, ಪೊಲೀಸರು ರಾಮು, ಯಶೋದ ಎಂಬ ದಂಪತಿಯನ್ನು ಬಂಧಿಸಿದ್ದು, ಬಾಣಾವರದ ನಿವಾಸಿಗಳಾದ ಇವರನ್ನು ಮಂಗಗಳನ್ನು ಹಿಡಿಯುವುದಕ್ಕಾಗಿಯೇ ನೇಮಕ ಮಾಡಲಾಗಿತ್ತು. ಉಗನೆ ಗ್ರಾಮದ ಮಂಜ, ರುದ್ರೇಶ್, ರಾಮಾನುಜ ಅಯ್ಯಂಗಾರ್ ನ್ನು ಬಂಧಿಸಲಾಗಿದೆ. ರಾಮಾನುಜ ಅಯ್ಯಂಗಾರ್ ನೇತೃತ್ವದಲ್ಲಿ ಗ್ರಾಮಸ್ಥರು ರಾಮು ಹಾಗೂ ಯಶೋಧ ಅವರನ್ನು ಸಂಪರ್ಕಿಸಿ ಮಂಗಗಳನ್ನು ಹಿಡಿದು ಕಾಡಿಗೆ ಬಿಡಲು ಮನವಿ ಮಾಡಿದ್ದರು. ಮಂಗಗಳನ್ನು ಹಿಡಿಯುವುದಕ್ಕಾಗಿ ಪಂಜರ ಸಿದ್ಧಪಡಿಸಿದ್ದ ಆರೋಪಿಗಳು, ಗೋಣಿಚೀಲದಲ್ಲಿ ಕಟ್ಟಿ ಅವುಗಳನ್ನು ಚೌಡನಹಳ್ಳಿಲ್ಲಿ ಎಸೆದು ಹೋಗಿದ್ದರು. ಈ ಪೈಕಿ ಕೆಲವು ತಪ್ಪಿಸಿಕೊಂಡಿದ್ದವು. ಘಟನೆಯಲ್ಲಿ ೩೦ ಮಂಗಗಳು ಸಾವನ್ನಪ್ಪಿದ್ದವು. ಪ್ರಾಥಮಿಕ ವರದಿಯ ಪ್ರಕಾರ, ಉಸಿರುಗಟ್ಟುವಿಕೆಯಿಂದ ಮಂಗಗಳು ಸಾವನ್ನಪ್ಪಿವೆ. ಇದೇ ವೇಳೆ ಮಂಗಗಳ ಹಾವಳಿಯನ್ನು ತಪ್ಪಿಸುವುದಕ್ಕೆ ಜಿಲ್ಲಾಡಳಿತ ಹೊಸ ಯೋಜನೆ ರೂಪಿಸುತ್ತಿದೆ. ಸಾವಿನ ಕಾರಣ ಅರಿಯುವುದಕ್ಕೆ ಕೋತಿಗಳ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಆರೋಪಿಗಳನ್ನು ಬಂಧಿüಸಲಾಗಿದೆ ಎಂದು ಡಿಎ??? ಬಸವರಾಜ್ ಹೇಳಿದ್ದಾರೆ. ೫೦ ಕ್ಕೂ ಹೆಚ್ಚು ಮಂಗಗಳನ್ನು ಹಿಡಿಯುವುದಕ್ಕಾಗಿ ಹಣ ನೀಡಿದ್ದಾಗಿ ಗ್ರಾಮಸ್ಥರು ಒಪ್ಪಿಕೊಂಡಿದ್ದಾರೆ. ಉಗನೆ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ತೆಂಗು, ಅಡಿಕೆ ಬೆಳೆಗಳಿಗೆ ಹಾನಿ ಉಂಟುಮಾಡುತ್ತಿದ್ದ ಹಿನ್ನೆಲೆಯಲ್ಲಿ ಮಂಗಗಳನ್ನು ಹಿಡಿಯಲು ಗ್ರಾಮಸ್ಥರು ಯತ್ನಿಸಿದ್ದರು.