ಸೋಮವಾರಪೇಟೆ, ಆ. ೨: ಇಲ್ಲಿನ ಸೋಮವಾರಪೇಟೆ ಜೇಸೀ ಪುಷ್ಪಗಿರಿ ಸಂಸ್ಥೆಯು ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಸ್ಥಳೀಯ ಜಾನಕಿ ಸಭಾಂಗಣದಲ್ಲಿ ನಡೆದ ಮಧ್ಯಂತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ವಲಯ ೨೦೨೦-೨೧ನೇ ಸಾಲಿನಲ್ಲಿ ೧೪ರ ಪ್ರತಿಷ್ಠಿತ ಘಟಕವಾಗಿ ಹೊರಹೊಮ್ಮಿದ್ದು, ಪ್ರಸಕ್ತ ವರ್ಷ ಜೇಸೀ ಸಂಸ್ಥೆಯ ಅಧ್ಯಕ್ಷೆ ಮಾಯಾ ಗಿರೀಶ್ ರವರ ನಾಯಕತ್ವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ ಹಿನ್ನೆಲೆ, ಅತ್ಯುತ್ತಮ ಘಟಕದ ಅಧ್ಯಕ್ಷೆ, ಅತ್ಯುತ್ತಮ ಬಿಸಿನೆಸ್ ಏರಿಯಾ ವಿನ್ನರ್, ಉತ್ತಮ ಬೆಳವಣಿಗೆ, ಆನ್ ಲೈನ್ ತರಬೇತಿ ಕಾರ್ಯಕ್ರಮಗಳ ಟ್ರೆಂಡ್ ಸೆಟ್ಟರ್, ಸ್ಕೋರೋಲ್ ಆಫ್ ಹಾನರ್ ಸೆಟ್ಟರ್ ಅವಾರ್ಡ್, ವಲಯದ ಅತ್ಯುತ್ತಮ ಯೋಜನೆ, ಐನೂರು ವಿದ್ಯಾರ್ಥಿಗಳಿಗೆ ಎನ್‌ಎಲ್‌ಟಿಎಸ್ ಪರೀಕ್ಷೆಗೆ ನೋಂದಣಿ ಮಾಡಿದ ಹೆಗ್ಗಳಿಕೆಯೊಂದಿಗೆ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತು. ವಲಯಾಧ್ಯಕ್ಷ ಭರತ್ ಎನ್. ಆಚಾರ್ಯ ಹಾಗೂ ವಲಯ ಉಪಾಧ್ಯಕ್ಷ ಬಾಬು ಗೌಡ ಹಾಗೂ ವಲಯಾಧಿಕಾರಿಗಳು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಜೇಸಿ ಮಾಯ ಗಿರೀಶ್ ಸೇರಿದಂತೆ ಜೇಸಿಐ ಸೋಮವಾರಪೇಟೆ ಪುಷ್ಪಗಿರಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.