*ವೀರಾಜಪೇಟೆ, ಆ. ೨: ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕೌಶಲ್ಯ ಮತ್ತು ಉದ್ಯಮಶೀಲತೆಯ ಘಟಕದ ಉದ್ಘಾಟನೆ ಹಾಗೂ ಕಾರ್ಯಾಗಾರ ನಡೆಯಿತು. ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಮದಲೈಮುತ್ತು ಅವರು ಕಾರ್ಯಕ್ರಮ ಉದ್ಘಾಟಿಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯದ ಪಾತ್ರ ಅಗತ್ಯವಾಗಿದ್ದು, ಉದ್ಯಮ ಶೀಲತೆಯು ಒಂದು ಸವಾಲಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲೆಯ ಸಿ.ಇ.ಡಿ.ಓ.ಕೆ.ಯ ಜಂಟಿ ನಿರ್ದೇಶಕ ಎಂ. ಮಂಜುನಾಥ ಸ್ವಾಮಿ ಹಾಗೂ ಉದ್ಯಮ ಶೀಲತೆಯ ಮೈಸೂರು ವಿಭಾಗದ ತರಬೇತುದಾರ ಎಂ. ವಿರೂಪಾಕ್ಷಪ್ಪ ಅವರು ವಿದ್ಯಾರ್ಥಿಗಳಿಗೆ ಕೌಶಲ್ಯ, ವೃತ್ತಿ ಮಾರ್ಗದರ್ಶನವನ್ನು ನೀಡಿ ಉದಾಹರಣೆ ಸಮೇತ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್ ಅವರು ಉದ್ಯಮ ಶೀಲತೆಯು ಒಂದು ಗುಂಪನ್ನು ಒಗ್ಗೂಡಿಸುವ ವೇದಿಕೆಯಾಗಿದೆ. ವಿದ್ಯಾರ್ಥಿಗಳು ವ್ಯವಹಾರ ಜ್ಞಾನವನ್ನು ಬೆಳೆಸಿಕೊಂಡು ಉತ್ತಮ ಉದ್ಯಮಿಗಳಾಗಬೇಕು ಎಂದರು.
ಘಟಕದ ಸಂಚಾಲಕ ಅಜಯ್ ಮ್ಯಾಥ್ಯು ಹಾಗೂ ಐಕ್ಯೂಎಸಿ ಸಂಚಾಲಕಿ ತೃಪ್ತಿ ಹಾಜರಿದ್ದರು. ವಿವಿಧ ಕಾಲೇಜುಗಳಿಂದ ಬಂದAತಹ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಪಾಲನೆಯೊಂದಿಗೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.