ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ
ಮಡಿಕೇರಿ, ಆ. ೨: ಅಪಘಾತ ಎಂಬವುದು ಆಕಸ್ಮಿಕವಾಗಿ ನಡೆಯುವ ಒಂದು ಘಟನೆಯಾಗಿದೆ. ಕಳೆದ ವಾರ ಯೋಧರಿದ್ದ ಕಾರಿಗೆ ಅಪಘಾತಪಡಿಸಿದ್ದಾರೆ ಎಂದು ಯೋಧರ ಹೆಸರನ್ನು ಬಿಜೆಪಿಯು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಬಿಜೆಪಿಯ ಅಂಗ ಸಂಸ್ಥೆಗಳ ಜೊತೆಗೂಡಿ ತಾ. ೩೦ ರಂದು ಮಡಿಕೇರಿ ನಗರದಲ್ಲಿ ಪ್ರತಿಭಟಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ. ಉಸ್ಮಾನ್ ಹೇಳಿದ್ದಾರೆ.
ಕ್ಷÄಲ್ಲಕ ವಿಚಾರವನ್ನು ದೊಡ್ಡ ವೈರುದ್ಯಗಳಂತೆ ಬಿಂಬಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದೇ ಬಿಜೆಪಿಗರ ಜಾಯಮಾನವಾಗಿದೆ. ಇಂತಹ ಮನಸ್ಥಿತಿಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಯೋಧರ ಹೆಸರನ್ನು ಬಳಸಿಕೊಂಡು ಯೋಧರ ಹೆಸರಿಗೆ ಕಳಂಕ ತರುವುದನ್ನು ಹಾಗೂ ಸಾರ್ವಜನಿಕವಾಗಿ ರಸ್ತೆ ತಡೆದು ಜನರಿಗೆ ತೊಂದರೆ ಕೊಡುವುದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ.