ವೀರಾಜಪೇಟೆ, ಆ. ೨: ಕೇರಳ ಹಾಗೂ ಮಹಾರಾಷ್ಟçದಲ್ಲಿ ಕೊರೊನಾ ಮೂರನೆ ಅಲೆ ಹೆಚ್ಚಾಗುತ್ತಿರುವುದರಿಂದ ಕೇರಳ ರಾಜ್ಯದಿಂದ ಜಿಲ್ಲೆಗೆ ಬರುವ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರನ್ನು ಹೊರತು ಪಡಿಸಿ ಆರ್‌ಟಿಪಿಸಿಆರ್ ವರದಿ ಇಲ್ಲದ ಯಾರಿಗೂ ಪ್ರವೇಶ ಇಲ್ಲ ಎಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು.

ಮಾಕುಟ್ಟ ಚೆಕ್‌ಪೋಸ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರÀರೊಂದಿಗೆ ಮಾತನಾಡಿದ ಅವರು, ಕಳೆದ ವಾರ ಎರಡಂಕಿ ಇದ್ದ ಸೋಂಕಿನ ಪ್ರಮಾಣ ಮೂರಂಕಿಗೆ ತಲುಪಿದೆ. ಕೇರಳ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪಾಸಿಟಿವ್ ರೇಟ್ ಹೆಚ್ಚಾಗುತ್ತಿದ್ದು, ೨೫ ಸಾವಿರ ಗಡಿ ದಾಟಿದೆ. ಜಿಲ್ಲೆಗೆ ಬರುವ ಪ್ರವಾಸಿಗರು ಹಾಗೂ ಇತರರಿಗೆ ೭೨ ಗಂಟೆಗಳ ಆರ್‌ಟಿಪಿಸಿಆರ್ ವರದಿ ಕಡ್ಡಾಯವಾಗಿದೆ. ಹಿಂದೆ ಸರಕು ಸಾಗಣೆ ಹಾಗೂ ತರಕಾರಿ ಸಾಗಿಸುವ ವಾಹನಗಳಿಗೆ ಆರ್‌ಟಿಪಿಸಿಆರ್ ವರದಿಗೆ ೧೪ ದಿನದ ಕಾಲಾವಕಾಶ ಇತ್ತು. ಇದೀಗ ಸರ್ಕಾರದ ನೂತನ ಸುತ್ತೋಲೆಯಂತೆ ೭ ದಿನಗಳ ಕಾಲಾವಕಾಶ ನೀಡಲಾಗಿದೆ. ಬದುಕು ಇದ್ದರೆ ಜೀವನ ಸಾಗಿಸಲು ಸಾಧ್ಯ ಎಲ್ಲರೂ ಸಹಕರಿಸುವಂತೆ ಕೋರಿದರು. ಯಾವುದೇ ಕಾರಣಕ್ಕೂ ನೆಗೆಟಿವ್ ವರದಿ ಇಲ್ಲದ ವಾಹನಗಳನ್ನು ಸಂಚರಿಸಲು ಅವಕಾಶ ನೀಡಿದರೆ ಅಧಿಕಾರಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಪಾಸಣಾ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ಆ್ಯಂಬ್ಯುಲೆನ್ಸ್ ಕೊಡುತ್ತೇವೆ

ಇದೇ ಸಂದರ್ಭ ಮಾಕುಟ್ಟ ನಿವಾಸಿ ಅಶ್ರಫ್ ಮಾತನಾಡಿ, ಮಾಕುಟ್ಟದಲ್ಲಿ ೨ ಕುಟುಂಬಗಳು ವಾಸಿಸುತ್ತಿದ್ದು, ದಿನಸಿ ಪದಾರ್ಥ ಸೇರಿದಂತೆ ಎಲ್ಲಾ ವಿಚಾರಗಳಿಗೂ ನಾವು ಕೇರಳ ರಾಜ್ಯಕ್ಕೆ ಅವಲಂಭಿತರಾಗಿ ದ್ದೇವೆ. ಮನೆಯಲ್ಲಿ ವಿಶೇಷಚೇತನರಿ ದ್ದಾರೆ ಅವರನ್ನು ಆಸ್ಪತ್ರೆಗೆ ಸಾಗಿಸಲು ಅವಕಾಶ ಮಾಡಿ ಕೊಡಬೇಕು ಎಂದು ಶಾಸಕರ ಬಳಿ ಕೇಳಿಕೊಂಡಾಗ ಕೇರಳ ರಾಜ್ಯಕ್ಕೆ ತೆರಳಿ ನಮ್ಮ ರಾಜ್ಯವನ್ನು ಪ್ರವೇಶ ಮಾಡಲು ಆರ್.ಟಿ.ಪಿ.ಸಿ.ಆರ್ ವರದಿ ಕಡ್ಡಾಯ ಎಂದು ಹೇಳಿದರು. ಮನೆಯಲ್ಲಿ ವಿಶೇಷಚೇತನರು ಆದವರು ಇದ್ದಾರೆ ಎಂದು ಹೇಳಿದಾಗ ಅವರಿಗೆ ಆ್ಯಂಬ್ಯುಲೆನ್ಸ್ ಕಳುಹಿಸಿ ಕೊಡುತ್ತೇವೆೆ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಎಂದು ಹೇಳಿದರು.

ಲಾರಿ ಚಾಲಕ ಜಾಗೃತ್ ಕುಮಾರ್ ಮಾಹಿತಿ ನೀಡಿ; ಗೂಡ್ಸ್ ವಾಹನ ಚಾಲಕರಿಗೆ ಆರ್‌ಟಿಪಿಸಿಆರ್ ವರದಿಗೆ ೧೪ ದಿನ ಅವಕಾಶ ಇದೆ. ಕಾಲಾವಕಾಶದಿಂದ ಮೂರು ದಿನ ಹೆಚ್ಚಳವಾಗಿದೆ. ತಪಾಸಣಾ ಸಿಬ್ಬಂದಿಗಳು ಸಹಕರಿಸುತ್ತಿಲ್ಲ ಎಂದು ಶಾಸಕರ ಬಳಿ ಅಳಲು ತೋಡಿಕೊಂಡಾಗ ‘ನಿಮಗೆ ಅವಕಾಶ ನೀಡಿದರೆ ಎಲ್ಲರನ್ನೂ ಪರಿಗಣಿಸಬೇಕಾಗುತ್ತದೆ. ನೆಗೆಟಿವ್ ವರದಿ ತಂದು ತಪಾಸಣಾ ಸಿಬ್ಬಂದಿಗಳಿಗೆ ತೋರಿಸಿ ವಾಹನವನ್ನು ತೆಗೆದುಕೊಂಡು ಹೋಗಿ’ ಎಂದು ಹೇಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭೇಟಿ ಸಂದರ್ಭ ಚುಪ್ಪಾ ನಾಗರಾಜ್, ಜೋಕಿಂ ರಾಡ್ರಿಗಸ್, ಮಲ್ಲಂಡ ಮಧು ದೇವಯ್ಯ ಮತ್ತಿತರರಿದ್ದರು.