ವೀರಾಜಪೇಟೆ, ಆ. ೨: ತನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನಿಗೆ ಕತ್ತಿಯಿಂದ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದಾತ ನನ್ನು ವೀರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ವೀರಾಜಪೇಟೆ ತಾಲೂಕಿನ ಕೊಳತೋಡು ಬೈಗೋಡು ಗ್ರಾಮದ ಪಿ.ರಾಜೇಶ್ ಎಂಬವರ ಕಾಫಿ ತೋಟದಲ್ಲಿ ಕೂಲಿ ಕೆಲಸಕ್ಕಾಗಿ ಬಂದಿದ್ದ ಪಂಚವಳ್ಳಿಯ ಉತ್ತನಹಳ್ಳಿ ನಾಗೇಶ್ ಅವರ ಪುತ್ರ ಬಸಪ್ಪ ಎಂಬಾತ ಜೂನ್ ೧೪ ರಂದು ಕೆಲಸ ಮುಗಿಸಿ ಸಂಜೆ ಸ್ನೇಹಿತ ಶಿವು ಜಲೇಂದ್ರ ಎಂಬಾತನೊAದಿಗೆ ಕ್ಷÄಲ್ಲಕ ಕಾರಣಕ್ಕಾಗಿ ಜಗಳ ಮಾಡಿ ಕತ್ತಿಯಿಂದ ತಲೆಯ ಭಾಗಕ್ಕೆ ಹಲ್ಲೆ ನಡೆಸಿ ಬಳಿಕ ತಲೆ ಮರೆಸಿಕೊಂಡಿದ್ದ. ಗಾಯಾಳುವನ್ನು ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಡೆಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿ ತ್ತಾದರೂ, ಚಿಕಿತ್ಸೆ ಫÀಲಕಾರಿಯಾಗದೆ ಶಿವು ಜಲೇಂದ್ರ ಮೃತಪಟ್ಟಿದ್ದರು. ಈ ಸಂಬAಧ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯ ಹುಡುಕಾಟ ನಡೆಸಿದಾಗ ತಾಲೂಕಿನ ಕಿರುಗೂರು ತೋಟ ಒಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದ ಹಿನ್ನೆಲೆ ಆರೋಪಿ ಬಸಪ್ಪನನ್ನು ಪತ್ತೆಹಚ್ಚಿ ಬಂಧಿಸಿ ಇಂದು ನ್ಯಾಯಾಧೀಶರ ಎದುರು ಹಾಜರು ಪಡಿಸಿದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನದಲ್ಲಿರಿಸುವAತೆ ಆದೇಶಿಸಿದ್ದಾರೆ.

ಡಿವೈಎಸ್‌ಪಿ ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಶ್ರೀಧರ್, ಠಾಣಾಧಿಕಾರಿ ಸಿದ್ಧಲಿಂಗ ಬಿ.ಬಾನಸೆ, ಸಿಬ್ಬಂದಿಗಳಾದ ರಾಮಪ್ಪ, ತೀರ್ಥಕುಮಾರ್, ಶ್ರೀಕಾಂತ್, ರವಿ, ನಾಣಯ್ಯ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. -ಈಶಾನ್ವಿ