ಮಡಿಕೇರಿ, ಜು. ೩೧: ವೀರಾಜಪೇಟೆಯ ಚಿಕ್ಕಪೇಟೆ ನಿವಾಸಿ ಮಾನಸಿಕ ಅಸ್ವಸ್ಥ ರಾಯ್ ಡಿಸೋಜ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ಐವರು ಪೊಲೀಸರಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಜೂನ್ ೧೦ ರಂದು ವೀರಾಜಪೇಟೆ ಪೊಲೀಸ್ ಠಾಣೆಯಲ್ಲಿ ರಾಯ್ ಡಿಸೋಜ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದರು ಇದರಿಂದ ಚಿಕಿತ್ಸೆ ಫಲಕಾರಿಯಾಗದೆ ರಾಯ್ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿ ದೂರು ನೀಡಿದ್ದರು. ಈ ಬಗ್ಗೆ ಐಜಿಪಿ ಪ್ರವೀಣ್ ಮಧುಕರ್ ಪಾವರ್ ಜಿಲ್ಲೆಗೆ ಆಗಮಿಸಿ ೮ ಮಂದಿ ಪೊಲೀಸರನ್ನು ಅಮಾನತ್ತುಗೊಳಿಸಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಹಿಸಿದ್ದರು.

ಸಿಐಡಿ ಪ್ರಾಥಮಿಕ ತನಿಖೆ ನಡೆಸಿ ೩೦೨ ಸೆಕ್ಷನ್ ಅಡಿ ಪ್ರಕರಣ ಕೂಡ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಅಮಾನತ್ತುಗೊಂಡ ೮ ಮಂದಿ ಪೈಕಿ ಎಂ.ವಿ. ಸುನಿಲ್, ಎನ್.ಹೆಚ್. ಸತೀಶ್, ಹೆಚ್.ಜಿ. ತನುಕುಮಾರ್, ಎನ್.ಎಸ್. ಲೋಕೇಶ್ ಸೇರಿದಂತೆ ರಾಯ್ ಡಿಸೋಜನಿಂದ ಹಲ್ಲೆ ಯಾಗಿದೆ ಎಂದು ದೂರು ಸಲ್ಲಿಸಿರುವ ಪೇದೆ ಸಂಗಮೇಶ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅದರಂತೆ ತಾ.೩೧ ರಂದು ನ್ಯಾಯಾಧೀಶರಾದ ದಿಂಡಿಲಗೊಪ್ಪ ಶಿವಪುತ್ರ ಅವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿತರ ಪರ ವೀರಾಜಪೇಟೆಯ ವಕೀಲ ಬಿ. ರತ್ನಾಕರ ಶೆಟ್ಟಿ ವಕಾಲತ್ತು ವಹಿಸಿ, ಘಟನೆ ನಡೆದ ದಿನದಂದು ರಾಯ್ ಡಿಸೋಜ ಆರೋಗ್ಯ ಸ್ಥಿರತೆಯ ಬಗ್ಗೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.