ಮಡಿಕೇರಿ, ಜು. ೩೧: ನಿವೇಶನಕ್ಕೆ ಸಂಬAಧಿಸಿದAತೆ ನಮೂನೆ ೯ ಮತ್ತು ೧೧ ಒದಗಿಸಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಲಂಚ ಪಡೆದಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

೫.೦೧.೨೦೧೭ ರಂದು ನರಿಯಂದಡ ಗ್ರಾಮ ಪಂಚಾಯ್ತಿಯ ಪಿಡಿಓ ಸಚಿನ್ ನರಿಯಂದಡ ಗ್ರಾಮದ ಸುಬ್ರಮಣ್ಯ ಅವರ ಪಿತ್ರಾರ್ಜಿತವಾಗಿ ಬಂದ ೧೦ ಸೆಂಟ್ ನಿವೇಶನಕ್ಕೆ ನಮೂನೆ ೯ ಮತ್ತು ೧೧ ಅನ್ನು ಒದಗಿಸಲು ಕೋರಿ ಅರ್ಜಿ ಸಲ್ಲಿಸಿದ್ದು, ನಮೂನೆ ಒದಗಿಸಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಚಿನ್ ರೂ. ೩ ಸಾವಿರ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸುಬ್ರಮಣ್ಯ ಅವರು ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ಸಲ್ಲಿಸಿದ್ದರು. ನಂತರ ದಾಳಿ ನಡೆಸಿ ಲಂಚದ ಹಣ ಸಹಿತ ಅಧಿಕಾರಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು.

ನ್ಯಾಯಾಧೀಶರಾದ ಜಿನರಾಳಕರ ಬೀಮರಾವ ಲಗಮಪ್ಪ ಅವರು ವಾದ-ಪ್ರತಿವಾದ ಆಲಿಸಿ ಲಂಚ ಪಡೆದ ಅಧಿಕಾರಿಗೆ ಕಲಂ ೭ ಪಿ.ಸಿ. ಕಾಯ್ದೆ ಅನ್ವಯ ೩ ವರ್ಷ ಸಜೆ, ರೂ. ೩ ಸಾವಿರ ದಂಡ ನೀಡಲು ತಪ್ಪಿದ್ದಲ್ಲಿ ೩ ತಿಂಗಳ ಸಜೆ ಮತ್ತು ಕಲಂ ೧೩ (೨) ಪಿ.ಸಿ. ಕಾಯ್ದೆ ಅನ್ವಯ ೪ ವರ್ಷ ಸಜೆ, ರೂ. ೫ ಸಾವಿರ ದಂಡ ಕೊಡಲು ತಪ್ಪಿದ್ದಲ್ಲಿ ೬ ತಿಂಗಳ ಸಜೆ ಎಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಿ ತೀರ್ಪು ನೀಡಿದ್ದಾರೆ. ವಿಶೇಷ ಸರಕಾರಿ ಅಭಿಯೋಜಕರಾದ ಎಂ.ಎA. ಕಾರ್ಯಪ್ಪ ಅವರು ವಕಾಲತ್ತು ಮಂಡಿಸಿದರು.