ಸೋಮವಾರಪೇಟೆ, ಜು. ೩೦: ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ನ ಅಧ್ಯಕ್ಷೆಯಾಗಿ ಆಶಾ ಯೋಗೇಂದ್ರ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಪ್ರೇಮ ಹೃಷಿಕೇಶ್, ಕಾರ್ಯದರ್ಶಿಯಾಗಿ ಅಮೃತಾ ಕಿರಣ್, ಖಜಾಂಚಿಯಾಗಿ ಕಾವೇರಿ ಸುರೇಶ್, ಜಂಟಿ ಕಾರ್ಯದರ್ಶಿಯಾಗಿ ಸವಿತ ರಾಜೀವ್, ಪದಾಧಿಕಾರಿಗಳಾಗಿ ಲತಾ ನಾಗೇಶ್, ತನ್ಮಯಿ ಪ್ರವೀಣ್, ಸಂದ್ಯಾ ಕೃಷ್ಣಪ್ಪ, ಸೌಮ್ಯ, ಚಂದ್ರಿಕಾ ಕುಮಾರ್ ಆಯ್ಕೆಯಾದರು.

ಸಾಕ್ಷಿ ಸಭಾಂಗಣದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನ ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ರವಿ, ಪದಗ್ರಹಣ ನೆರವೇರಿಸಿದರು. ನಂತರ ಅವರು ಮಾತನಾಡಿ, ಮಹಿಳೆಯರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುವುದರೊಂದಿಗೆ ಸ್ವ ಉದ್ಯೋಗದಲ್ಲಿ ಯಶಸ್ಸು ಗಳಿಸಬೇಕು ಎಂದರು.

ಇದೇ ಕಾರ್ಯಕ್ರಮದಲ್ಲಿ ಕೋವಿಡ್ ಸಂದರ್ಭ ಉತ್ತಮ ಸೇವೆ ಸಲ್ಲಿಸಿದ ಶಸ್ತçಚಿಕಿತ್ಸಕ ಸತೀಶ್ ಕುಮಾರ್, ವಿಶೇಷಚೇತನರಾದರೂ ಸ್ವ ಉದ್ಯೋಗದಲ್ಲಿ ಯಶಕಂಡಿರುವ ಭಾಗ್ಯ ಸಂಗಮೇಶ್ ಅವರನ್ನು ಸನ್ಮಾನಿಸಲಾಯಿತು. ನಿಕಟಪೂರ್ವ ಅಧ್ಯಕ್ಷೆ ಕವಿತಾ ವಿರೂಪಾಕ್ಷ ಸ್ವಾಗತಿಸಿ, ಪ್ರೇಮಾ ವಂದಿಸಿದರು. ನಯನ, ನಂದಿನಿ ಕಾರ್ಯಕ್ರಮ ನಿರ್ವಹಿಸಿದರು.