ಮಡಿಕೇರಿ, ಜು. ೩೦: ಮಡಿಕೇರಿ ಲಯನ್ಸ್ ಸಂಸ್ಥೆಯ ೨೦೨೧-೨೨ನೇ ಸಾಲಿಗೆ ಅಧ್ಯಕ್ಷರಾಗಿ ನಟರಾಜು ಕೆಸ್ತೂರ್ ಅವರು ನೇಮಕ ಗೊಂಡಿದ್ದಾರೆ. ನಗರದ ಲಯನ್ಸ್ ಸಭಾಂಗಣದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲೆ ೩೧೭ರ ಪ್ರಥಮ ಉಪ ರಾಜ್ಯಪಾಲ ಲಯನ್ ಸಂಜೀತ್ ಶೆಟ್ಟಿ ಅವರು ನೂತನ ಅಧ್ಯಕ್ಷರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ನಂತರ ಮಾತನಾಡಿದ ಅವರು, ಸುಮಾರು ೫೬ ವರ್ಷಗಳ ಇತಿಹಾಸವಿರುವ ಮಡಿಕೇರಿ ಲಯನ್ಸ್ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯದರ್ಶಿಯಾಗಿ ಪಿ.ಪಿ. ಸೋಮಣ್ಣ, ಖಜಾಂಚಿಯಾಗಿ ಕೆ.ಕೆ. ದಾಮೋದರ್, ಉಪಾಧ್ಯಕ್ಷರಾಗಿ ಸಂತೋಷ್ ಅಣ್ವೇಕರ್ ಹಾಗೂ ಕಮಲ ಮುರುಗೇಶ್, ಸಂವಹನಾಧಿಕಾರಿಯಾಗಿ ಅಂಬೇಕಲ್ ನವೀನ್, ನಿರ್ವಾಹಕರಾಗಿ ಮಧುಕರ್ ಕೆ., ಸಂಯೋಜಕರಾಗಿ ಬಿ.ವಿ. ಮೋಹನದಾಸ್, ಸದಸ್ಯತ್ವ ಅಧ್ಯಕ್ಷರಾಗಿ ಎಂ.ಎ. ನಿರಂಜನ್, ಸೇವಾ ಅಧ್ಯಕ್ಷರಾಗಿ ಕೆ.ಟಿ. ಬೇಬಿ ಮ್ಯಾಥ್ಯೂ, ನಿರ್ದೇಶಕರುಗಳಾಗಿ ಬಾಬುಚಂದ್ರ ಉಳ್ಳಾಗಡ್ಡಿ, ಡಿ.ಜಿ. ಕಿಶೋರ್, ಎಸ್.ಬಿ. ಮುರುಗೇಶ್, ಮೋಹನ್ ಕುಮಾರ್, ಗೀತಾ ಮಧುಕರ್, ಅರುಣಾ ಮೋಹನ್, ಮಧುಕರ್ ಶೇಟ್, ಜೆ.ವಿ. ಕೋಟಿ, ಟೈಲ್ ಟ್ವಿಸ್ಟರ್ ಆಗಿ ಕನ್ನಂಡ ಎ. ಬೊಳ್ಳಪ್ಪ, ಟೀಮರ್ ಆಗಿ ಎಂ.ಪಿ. ನಾಗೇಂದ್ರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಇದೇ ಸಂದರ್ಭ ಬಿ.ಕೆ. ಅರವಿಂದ್, ಆರ್. ರಾಘವೇಂದ್ರ ಹಾಗೂ ಶೈಲಾ ನಟರಾಜು ಅವರು ನೂತನ ಸದಸ್ಯರಾಗಿ ಸೇರ್ಪಡೆ ಗೊಂಡರು. ಹಿಂದಿನ ಸಾಲಿನ ಅಧ್ಯಕ್ಷೆ ಅನಿತಾ ಸೋಮಣ್ಣ ಸ್ವಾಗತಿಸಿ, ಈ ಸಾಲಿನ ಕಾರ್ಯದರ್ಶಿ ಸೋಮಣ್ಣ ವಂದಿಸಿದರು. ಮಧುಕರ್ ಕೆ. ಕಾರ್ಯಕ್ರಮ ನಿರ್ವಹಿಸಿದರು, ಸ್ಕಂದ ಮಧುಕರ್ ಪ್ರಾರ್ಥಿಸಿದರು.