ಗೋಣಿಕೊಪ್ಪ ವರದಿ, ಜು. ೩೦: ಜುಲೈ ತಿಂಗಳ ಕೊನೆಯಲ್ಲಿ ನಿವೃತ್ತಿ ಹೊಂದಲಿರುವ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಹಾಗೂ ಕಾವೇರಿ ಕಾಲೇಜು ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ವಿ. ಕುಸುಮಾಧರ ಅವರನ್ನು ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆ ನೀಡಿ ಗೌರವಿಸಿ ಶುಭಕೋರಲಾಯಿತು. ಕೆ.ವಿ. ಕುಸುಮಾಧರ ಮಾತನಾಡಿ, ಹಳೆಯ ವಿದ್ಯಾರ್ಥಿಗಳಿಂದ ಕಾಲೇಜು ಅಭಿವೃದ್ಧಿಗೆ ನಿರಂತರ ಪ್ರೋತ್ಸಾಹ ನೀಡಬೇಕಿದೆ ಎಂದರು.
ಹಳೆಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ತಿರುನೆಲ್ಲಿಮಾಡ ಎಂ. ದೇವಯ್ಯ ಮಾತನಾಡಿ, ಕಾಲೇಜು ಅಭಿವೃದ್ದಿಯಲ್ಲಿ ಕೆ. ವಿ. ಕುಸುಮಾಧರ ಅವರ ಸೇವೆ ಮೆಚ್ಚುವಂತದ್ದು. (ನ್ಯಾಕ್) ರಾಷ್ಟಿçÃಯ ಮೌಲ್ಯಮಾಪನ ಮಾನ್ಯತ ಮಂತ್ರಾಲಯ ವತಿಯಿಂದ ಕಾಲೇಜಿನಲ್ಲಿ ಮೌಲ್ಯಮಾಪನ ಆರಂಭಿಸುವ ವರ್ಷಗಳಲ್ಲಿ ಹೆಚ್ಚು ದುಡಿದಿದ್ದಾರೆ. ಶೈಕ್ಷಣಿಕವಾಗಿ ಅಭಿವೃದ್ದಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಈ ಸಂದರ್ಭ ಸಂಘದ ಕಾರ್ಯದರ್ಶಿ ಪಳಂಗAಡ ವಾಣಿ ಚಂಗಪ್ಪ, ಖಜಾಂಜಿ ಪಾಲೇಂಗಡ ಮನು ನಂಜಪ್ಪ, ಸಂಚಾಲಕಿ ಎಸ್. ಎಂ. ರಜನಿ, ನಿರ್ದೇಶಕರಾದ ಜಮ್ಮಡ ಜಯ ಜೋಯಪ್ಪ, ಪೊಕ್ಕಳಿಚಂಡ ಬಿ. ಪೂಣಚ್ಚ, ಬಲ್ಯಮೀದೇರಿರ ಆಶಾ ಶಂಕರ್, ಸಲಹೆಗಾರರಾದ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಪುಚ್ಚಿಮಾಡ ಸುಭಾಶ್, ಕಳ್ಳಿಚಂಡ ಸಿ. ಮುತ್ತಪ್ಪ, ಸಣ್ಣುವಂಡ ಕಿಶೋರ್ ನಾಚಪ್ಪ ಇದ್ದರು.