ಮಡಿಕೇರಿ, ಜು. ೨೯: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಎನ್‌ಸಿಸಿ ಘಟಕವು ೧೯ ಕರ್ನಾಟಕ ಬೆಟಾಲಿಯನ್‌ನ ಕಮಾಂಡರ್ ಕರ್ನಲ್ ಚೇತನ್ ಧಿಮನ್ ಅವರ ಮಾರ್ಗದರ್ಶನದಂತೆ ವೀರ ಸೇನಾನಿ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆಯನ್ನು ಸ್ವಚ್ಛಗೊಳಿಸುವ ಮೂಲಕ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಿತು ಎಂದು ಶಾಲಾ ಎನ್‌ಸಿಸಿ ಅಧಿಕಾರಿ ದಾಮೋದರ ಗೌಡ ತಿಳಿಸಿದ್ದಾರೆ.