ಗೋಣಿಕೊಪ್ಪ ವರದಿ, ಜು. ೨೯: ಜೆಸಿಐ ವಲಯ ೧೪ ರ ಮಧÀ್ಯ ವಾರ್ಷಿಕ ಸಮ್ಮೇಳನದಲ್ಲಿ ಜೆಸಿಐ (ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್) ಪೊನ್ನಂಪೇಟೆ ಗೋಲ್ಡನ್ ಘಟಕ ಐದು ಪ್ರಶಸ್ತಿ ಪಡೆದುಕೊಂಡಿದೆ.
ಉತ್ತಮ ಕಾರ್ಯಕ್ರಮ ಸಂಯೋಜನೆಗೆ ಅತ್ಯುತ್ತಮ ಘಟಕ ಪ್ರಶಸ್ತಿ, ಕೊರೊನಾ ಲಾಕ್ಡೌನ್ ನಡುವೆ ಮನೆಯಂಗಳದಲ್ಲಿ ಹೆಚ್ಚು ಗಿಡ ನೆಟ್ಟ ಸಾಧನೆಗೆ ಗ್ರೀನ್ ವೀಕ್ ವಿನ್ನರ್ ಪ್ರಶಸ್ತಿ, ರಕ್ತದಾನ ಶಿಬಿರದ ಮೂಲಕ ಸುಮಾರು ೧೮೦ ಯೂನಿಟ್ ರಕ್ತ ಸಂಗ್ರಹಿಸಿದ ಕಾರಣಕ್ಕೆ ಪ್ರಥಮ ಬಹುಮಾನ, ವ್ಯಾಪಾರ ವಿಭಾಗದಲ್ಲಿ ಸ್ಟಾರ್ ಆಫ್ ವೀಕ್, ಮಕ್ಕಳಿಗೆ ನೀಡಿದ ಆನ್ಲೈನ್ ತರಬೇತಿಗಾಗಿ ಉತ್ತಮ ತರಬೇತಿ ನೀಡಿದ ಘಟಕಕ್ಕೆ ಬಹುಮಾನ ನೀಡಲಾಯಿತು.
ಸೋಮವಾರಪೇಟೆ ಜಾನಕಿ ಕನ್ವೆನ್ಷನ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಜೆಸಿಐ ವಲಯ ಅಧ್ಯಕ್ಷ ಭರತ್ ಎನ್. ಆಚಾರ್ಯ, ಉಪಾಧ್ಯಕ್ಷ ವಿಜಯಕುಮಾರ್ ಅವರಿಂದ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷ ಪಾರುವಂಗಡ ದಿಲನ್ ಚಂಗಪ್ಪ, ಜೆಸಿರೆಟ್ ಅಧ್ಯಕ್ಷೆ ರಿಸ್ತಾ ಚಂಗಪ್ಪ, ಜೂನಿಯರ್ ಜೆಸಿ ಅಧ್ಯಕ್ಷ ಮಹಿತ್ ಪೂಣಚ್ಚ ಪ್ರಶಸ್ತಿ ಸ್ವೀಕರಿಸಿದರು.