ಮಡಿಕೇರಿ, ಜು. ೩೦: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡುವ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿಯನ್ನು ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಬರೆದ ಮೈತ್ರಿ ಪ್ರಕಾಶನ ಪ್ರಕಟಿಸಿದ ಕೂರ್ಗ್ ರೆಜಿಮೆಂಟ್ ಕೃತಿ ಪಡೆದುಕೊಂಡಿದೆ. ಲೇಖಕರು, ಮಡಿಕೇರಿಯ ಮಕ್ಕಳ ತಜ್ಞ ವೈದ್ಯರಾದ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಅವರ ಮೊದಲ ಕೃತಿಯಾದ ಕೂರ್ಗ್ ರೆಜಿಮೆಂಟ್ ಅಪಾರವಾದ ಜನಪ್ರಿಯತೆ ಗಳಿಸುವುದರ ಜೊತೆಗೆ ಮೂರು ಮರುಮುದ್ರಣವನ್ನು ಕಂಡಿದೆ. ಈ ಪ್ರಶಸ್ತಿ ಐದು ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿರುತ್ತದೆ.