ನಾಪೋಕ್ಲು, ಜು. ೩೦: ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ಪಾರಾಣೆ-ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಲಿ ಗ್ರಾಮದ ಶ್ರೀ ಶಾಸ್ತಾವು ದೇವಳದ ದೇವರ ಕಾಡಿನಲ್ಲಿ ೨೦೦ ಕಾಡು ಜಾತಿಯ ಮರದ ಗಿಡಗಳನ್ನು ನೆಡುವದರ ಮೂಲಕ ವಿಶ್ವ ಪರಿಸರ ಸಂರಕ್ಷಣಾ ದಿನವನ್ನು ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ವಿನಯ್, ಕೊಡಗು ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ದೇವರ ಕಾಡುಗಳಿವೆ. ಆದರೆ, ಅವು ಹೊರ ನೋಟಕ್ಕೆ ಮಾತ್ರ ದಟ್ಟವಾಗಿ ಬೆಳೆದಿರುವಂತೆ ಕಂಡು ಬರುತ್ತಿದೆ. ಮರಗಳ ಬೆಳವಣಿಗೆಗೆ ಕಾಡು ಬಳ್ಳಿಗಳು ಹಬ್ಬುವದರ ಮೂಲಕ ತೊಡಕುಂಟಾಗುತ್ತಿವೆ. ಗ್ರಾಮಸ್ಥರು ಕಾಡು ಬಳ್ಳಿಗಳನ್ನು ಕತ್ತರಿಸಿ ಮರಗಳ ಬೆಳವಣಿಗೆಗೆ ಅವಕಾಶ ಕಲ್ಪಿಸಬೇಕು ಎಂದರು
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಡಾ. ಪಂಚಮ್ ತಿಮ್ಮಯ್ಯ, ಕಾರ್ಯದರ್ಶಿ ಕೇಟೋಳಿರ ರತ್ನಾ ಚರ್ಮಣ್ಣ, ಖಜಾಂಚಿ ಕೇಟೋಳಿರ ಕುಟ್ಟಪ್ಪ, ಸೇವಾ ಟ್ರಸ್ಟ್ ಅಧ್ಯಕ್ಷ
ಎಳ್ತಂಡ ಬೋಪಣ್ಣ, ಪದಾಧಿಕಾರಿಗಳಾದ ಬೊಪ್ಪಂಡ ಡಾ.ಜಾಲಿ ಬೋಪಯ್ಯ, ಅಪ್ಪಾರಂಡ ಸುಭಾಷ್ ತಿಮ್ಮಯ್ಯ, ಚೌರೀರ ಉದಯ, ಬೊಳ್ಳಂಡ ಶ್ಯಾಮ್ ಬಿದ್ದಪ್ಪ, ಅಪ್ಪಚೆಟ್ಟೋಳಂಡ ವಸಂತ ಮುತ್ತಪ್ಪ, ದೇವಳದ ಅಧ್ಯಕ್ಷರು, ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ಇದ್ದರು.